ಸಾನಿಯಾ ಪತಿ ಶೊಯೇಬ್ ಆರೋಗ್ಯ ವಿಚಾರಿಸಿ ಶಿಖರ್ ಧವನ್! ಪಾಕ್ ಅಭಿಮಾನಿಗಳ ಪ್ರತಿಕ್ರಿಯೆ ಏನು?

ಶನಿವಾರ, 20 ಜನವರಿ 2018 (08:04 IST)
ನವದೆಹಲಿ: ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಪತಿ ಶೊಯೇಬ್ ಮಲಿಕ್ ಮೊನ್ನೆಯಷ್ಟೇ ಹ್ಯಾಮಿಲ್ಟನ್ ನಲ್ಲಿ ಕ್ರಿಕೆಟ್ ಆಡುವಾಗ ಚೆಂಡು ತಲೆಗೆ ಬಡಿದು ಗಾಯ ಮಾಡಿಕೊಂಡಿದ್ದರು. ಇದೀಗ ಟೀಂ ಇಂಡಿಯಾ ಕ್ರಿಕೆಟಿಗ ಶಿಖರ್ ಧವನ್, ಮಲಿಕ್ ಆರೋಗ್ಯ ವಿಚಾರಿಸಿದ್ದಾರೆ.
 

ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿರುವ ಶಿಖರ್ ಧವನ್ ‘ಗೆಳೆಯ ಶೊಯೇಬ್, ನೀನು ಸುರಕ್ಷಿತವಾಗಿದ್ದೀಯಾ ಎಂದುಕೊಳ್ಳುತ್ತೇನೆ, ಸದ್ಯದಲ್ಲೇ ಫಿಟ್ ಆಗಿ ಕ್ರಿಕೆಟ್ ಅಂಗಣಕ್ಕೆ ಮರಳುತ್ತೀಯಾ ಎಂದುಕೊಂಡಿದ್ದೇನೆ’ ಎಂದು ಟ್ವೀಟ್ ಮಾಡಿದ್ದರು.

ಭಾರತೀಯ ಕ್ರಿಕೆಟಿಗನ ಈ ಮನೋಭಾವವನ್ನು ಪಾಕ್ ಕ್ರಿಕೆಟ್ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಮಲಿಕ್ ಆರೋಗ್ಯ ವಿಚಾರಿಸಿದ ಧವನ್ ಗೆ ಪಾಕ್ ಅಭಿಮಾನಿಗಳು ಧನ್ಯವಾದ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲ, ಸಂಪ್ರದಾಯಿಕ ಎದುರಾಳಿ ತಂಡದ ಆಟಗಾರನ ಹೃದಯ ವೈಶಾಲ್ಯತೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ