ಕ್ವಾರಂಟೈನ್ ಮುಗಿಸಿ ಶೂಟಿಂಗ್ ಗೆ ಹಾಜರಾದ ಸೌರವ್ ಗಂಗೂಲಿ

ಭಾನುವಾರ, 2 ಆಗಸ್ಟ್ 2020 (10:27 IST)
ಮುಂಬೈ: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕ್ವಾರಂಟೈನ್ ಅವಧಿ ಮುಗಿಸಿ ಮತ್ತೆ ಕಣಕ್ಕೆ ಮರಳಿದ್ದಾರೆ. ಅವರು ನಡೆಸಿಕೊಡುವ ಕ್ರಿಕೆಟ್ ಶೋದ ಶೂಟಿಂಗ್ ಗೆ ಮರಳಿದ್ದಾರೆ.


ಗಂಗೂಲಿ ಸಹೋದರ ಸ್ನೇಹಶಿಷ್ ಗೆ ಕೊರೋನಾ ಆಗಿದ್ದ ಹಿನ್ನಲೆಯಲ್ಲಿ ಗಂಗೂಲಿ ಕೂಡಾ ಕೆಲವು ದಿನ ಕ್ವಾರಂಟೈನ್ ಗೊಳಗಾಗಿದ್ದರು. ಕೊರೋನಾ ಪರೀಕ್ಷೆ ನೆಗೆಟಿವ್ ಬಂದ ಹಿನ್ನಲೆಯಲ್ಲಿ ಗಂಗೂಲಿ ತಮ್ಮ ದೈನಂದಿನ ಕೆಲಸಕ್ಕೆ ಮರಳಿದ್ದರು.

ಇದೀಗ ಬಹಳ ದಿನಗಳ ನಂತರ ಶೂಟಿಂಗ್ ಗೆ ಹಾಜರಾದ ಖುಷಿಯನ್ನು ಹಂಚಿಕೊಂಡಿದ್ದಾರೆ. ಸಾಕಷ್ಟು ಮುನ್ನೆಚ್ಚರಿಕೆ ಕೈಗೊಂಡೇ ಶೂಟಿಂಗ್ ಮಾಡಲಾಗಿದೆ ಎಂದು ಗಂಗೂಲಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ