ಟ್ರೋಲ್ ಗೊಳಗಾದ ರಿಷಬ್ ಪಂತ್ ನೆರವಿಗೆ ನಿಂತ ಸೌರವ್ ಗಂಗೂಲಿ

ಶನಿವಾರ, 9 ನವೆಂಬರ್ 2019 (10:08 IST)
ಮುಂಬೈ: ಕಳಪೆ ಪ್ರದರ್ಶನದಿಂದಾಗಿ ನಿರಂತರವಾಗಿ ಟೀಕೆಗೊಳಗಾಗುತ್ತಿರುವ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಬೆಂಬಲವಾಗಿ ನಿಂತಿದ್ದಾರೆ.


ಮೊದಲ ಪಂದ್ಯದಲ್ಲಿ ಡಿಆರ್ ಎಸ್ ತಪ್ಪಾಗಿ ಬಳಕೆ ಮಾಡಿ ಟ್ರೋಲ್ ಗೊಳಗಾಗಿದ್ದ ರಿಷಬ್ ದ್ವಿತೀಯ ಪಂದ್ಯದಲ್ಲಿ ವಿಕೆಟ್ ಕೀಪಿಂಗ್ ನ ಬೇಸಿಕ್ ರೂಲ್ಸ್ ನ್ನೇ ಮರೆತು ಆಡಿದ್ದರು. ಇದೂ ಸಾಲದೆಂಬಂತೆ ಬ್ಯಾಟಿಂಗ್ ನಲ್ಲೂ ರಿಷಬ್ ರಿಂದ ಹೇಳಿಕೊಳ್ಳುವ ಪ್ರದರ್ಶನ ಬಂದಿಲ್ಲ. ಹೀಗಾಗಿ ರಿಷಬ್ ಹಿಗ್ಗಾ ಮುಗ್ಗಾ ಟೀಕೆಗೊಳಗಾಗುತ್ತಿದ್ದಾರೆ.

ಈ ಬಗ್ಗೆ ಮಾತನಾಡಿರುವ ಗಂಗೂಲಿ, ರಿಷಬ್ ಉತ್ತಮ ಆಟಗಾರ. ಅವರಿಗೆ ಸ್ವಲ್ಪ ಸಮಯ ಕೊಡಿ. ಆತ ಸುಧಾರಿಸಿಕೊಳ್ಳುತ್ತಾನೆ ಎಂದು ಗಂಗೂಲಿ ಬೆಂಬಲ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ