ವಿದೇಶ ತಂಡದ ಪರ ಆಡಲು ನಾನು ಸಿದ್ಧ: ಶ್ರೀಶಾಂತ್
ನವದೆಹಲಿ: 2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಹೇರಿದ ಆಜೀವ ನಿಷೇಧವನ್ನು ಕೇರಳ ಹೈಕೋರ್ಟ್ ಎತ್ತಿಹಿಡಿದಿದೆ. ಇದರ ಬೆನ್ನಲ್ಲೇ ಕೇರಳದ ಕ್ರಿಕೆಟಿಗ ಎಸ್.ಶ್ರೀಶಾಂತ್ ವಿದೇಶಿ ತಂಡದ ಪರ ಆಡಲು ನಾನು ಸಿದ್ಧನಿದ್ದೇನೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಾನು ಬೇರೆ ದೇಶದ ಪರ ಆಡಲು ಸ್ವತಂತ್ರನಿದ್ದೇನೆ. ನನಗೀಗ 33 ವರ್ಷ ವಯಸ್ಸು. ಹೆಚ್ಚೆಂದರೆ ಇನ್ನು 6 ವರ್ಷ ನಾನು ಆಡಬಹುದು. ನಾನು ಒಬ್ಬ ಕ್ರಿಕೆಟ್ ಪ್ರೇಮಿಯಾಗಿ ಕ್ರಿಕೆಟ್ ಆಡಲು ಬಯಸುತ್ತೇನೆ ಎಂದು ಹೇಳಿದರು.