ಹೊಟ್ಟೆಪಾಡಿಗೆ ಬಸ್ ಡ್ರೈವರ್ ಆದ ಖ್ಯಾತ ಕ್ರಿಕೆಟಿಗ

ಗುರುವಾರ, 4 ಮಾರ್ಚ್ 2021 (09:47 IST)
ಕೊಲೊಂಬೊ: ಶ್ರೀಲಂಕಾದ 2011 ರ ವಿಶ್ವಕಪ್ ತಂಡದ ಭಾಗವಾಗಿದ್ದ ಸೂರಜ್ ರಣದೀವ್ ಬಗ್ಗೆ ಕ್ರಿಕೆಟ್ ಪ್ರಿಯರಿಗೆ ಗೊತ್ತಿರುತ್ತದೆ. ಆ ಕ್ರಿಕೆಟಿಗ ಈಗ ತಮ್ಮ ಹೊಟ್ಟೆಪಾಡಿಗಾಗಿ ಆಸ್ಟ್ರೇಲಿಯಾದಲ್ಲಿ ಬಸ್ ಚಾಲಕನ ಕೆಲಸ ಮಾಡುತ್ತಿದ್ದಾರೆ ಎಂದರೆ ನೀವು ನಂಬಲೇಬೇಕು.


ಲಂಕಾ ಪರ 12 ಟೆಸ್ಟ್, 31 ಏಕದಿನ, ಮತ್ತು 7 ಟಿ20 ಪಂದ್ಯಗಳನ್ನಾಡಿದ್ದ ಮಾಜಿ ಕ್ರಿಕೆಟಿಗ ರಣದೀವ್ ತಮ್ಮ ಹೊಟ್ಟೆಪಾಡಿಗಾಗಿ ಈಗ ಆಸ್ಟ್ರೇಲಿಯಾದ ಟ್ರಾವೆಲ್ಸ್ ಕಂಪನಿಯೊಂದರಲ್ಲಿ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. ಈ ಟ್ರಾವೆಲ್ಸ್ ಕಂಪನಿಯಲ್ಲಿ 1200 ಬಸ್ ಚಾಲಕರಿದ್ದು, ಅವರಲ್ಲಿ ರಣದೀವ್ ಮಾತ್ರವಲ್ಲದೆ, ಇನ್ನೊಬ್ಬ ಲಂಕಾ ಕ್ರಿಕೆಟಿಗ ಚಿಂತಕ ಜಯಸಿಂಘೆ ಕೂಡಾ ಸೇರಿದ್ದಾರೆ.

ಕ್ರಿಕೆಟ್ ಬಿಟ್ಟ ಮೇಲೆ ಇವರಿಗೆ ಹೊಟ್ಟೆಪಾಡಿಗಾಗಿ ಒಂದು ವೃತ್ತಿ ಬೇಕಿತ್ತು. ಆಗ ಕೈ ಹಿಡಿದಿದ್ದೇ ಈ ಕೆಲಸ. ಸದ್ಯಕ್ಕೆ ರಣದೀವ್ ಮೆಲ್ಬೋರ್ನ್ ನಲ್ಲಿದ್ದಾರೆ. ಸದ್ಯಕ್ಕೆ ಬಿಡುವು ಸಿಕ್ಕಾಗಲೆಲ್ಲಾ ಅಲ್ಲಿನ ಕ್ಲಬ್ ಪರ ಕ್ರಿಕೆಟ್ ಆಡುತ್ತಿರುತ್ತಾರಂತೆ. ಅಷ್ಟೇ ಏಕೆ ಇತ್ತೀಚೆಗೆ ಭಾರತದ ವಿರುದ್ಧ ನಡೆದ ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ಆಸೀಸ್ ಆಟಗಾರರಿಗೆ ನೆಟ್ ಬೌಲರ್ ಆಗಿಯೂ ಸಹಾಯ ಮಾಡಿದ್ದರಂತೆ. ಆದರೆ ಹೊಟ್ಟೆ ಪಾಡಿಗೆ ಚಾಲಕನ ಕೆಲಸ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ