ಅಥಿಯಾ ಜೊತೆಗಿನ ಸಂಬಂಧಕ್ಕೆ ಕೆಎಲ್ ರಾಹುಲ್ ಗೆ ಸುನಿಲ್ ಶೆಟ್ಟಿಯ ಗ್ರೀನ್ ಸಿಗ್ನಲ್!
ಇದೀಗ ಇಬ್ಬರ ಸಂಬಂಧಕ್ಕೆ ಸ್ವತಃ ಅಥಿಯಾ ತಂದೆ, ನಟ ಸುನಿಲ್ ಶೆಟ್ಟಿ ಪರೋಕ್ಷವಾಗಿ ಒಪ್ಪಿಗೆ ಕೊಟ್ಟಿದ್ದಾರೆ. ಅಥಿಯಾ ಇಂಗ್ಲೆಂಡ್ ನಲ್ಲಿ ರಾಹುಲ್ ಗೆ ಜೊತೆಯಾಗಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿರುವ ಸುನಿಲ್ ಹೌದು, ಆಕೆ ಇಂಗ್ಲೆಂಡ್ ನಲ್ಲಿರುವುದು ನಿಜ, ಆದರೆ ಸಹೋದರ ಅಹಾನ್ ಜೊತೆ ಹಾಲಿಡೇಗೆ ಹೋಗಿದ್ದಾಳೆ ಎಂದಿದ್ದಾರೆ. ಇನ್ನು, ರಾಹುಲ್ ಮತ್ತು ಅಥಿಯಾ ನಡುವಿನ ಸಂಬಂಧದ ಬಗ್ಗೆ ಅವರನ್ನೇ ಕೇಳುವುದು ಉತ್ತಮ. ಇಬ್ಬರದ್ದೂ ಒಳ್ಳೆ ಜೋಡಿ ಎಂದಿದ್ದಾರೆ.