ಧೋನಿಗೂ ಕೋಪ ಬರಲ್ವಾ? ಯಾವಾಗ?

ಭಾನುವಾರ, 26 ನವೆಂಬರ್ 2017 (08:11 IST)
ರಾಂಚಿ: ಧೋನಿ ಎಂದರೆ ಅತೀ ತಾಳ್ಮೆಯ ವ್ಯಕ್ತಿ ಎಂದೇ ಪರಿಚಿತ. ಅವರು ಬಹಿರಂಗವಾಗಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದು ಕಡಿಮೆ. ಆದರೆ ಧೋನಿಗೂ ಕೋಪ ಬರುತ್ತದೆ ಎಂದು ಸಹ ಕ್ರಿಕೆಟಿಗ ಸುರೇಶ್ ರೈನಾ ಹೇಳಿಕೊಂಡಿದ್ದಾರೆ.
 

ಸಂದರ್ಶನವೊಂದರಲ್ಲಿ ಧೋನಿ ರಹಸ್ಯ ಬಿಚ್ಚಿಟ್ಟ ಸುರೇಶ್ ರೈನಾ ಕೂಲ್ ಕ್ಯಾಪ್ಟನ್ ಗೂ ಸಿಟ್ಟು ಬರುತ್ತದೆ.  ಆದರೆ ಕ್ಯಾಮರಾ ಎದುರುಗಡೆ ತೋರಿಸುವುದಿಲ್ಲ. ಓವರ್ ಮುಗಿದ ಮೇಲೆ ಕ್ಯಾಮರಾ ಕಣ್ಣು ನಮ್ಮ ಮೇಲೆ ಇಲ್ಲದ ಹೊತ್ತಲ್ಲಿ ಅವರು ತಮ್ಮ ಭಾವನೆ ಹೊರ ಹಾಕುತ್ತಾರೆ.

ಹಿಂದೊಮ್ಮೆ ಪಾಕ್ ಜತೆ ಆಡುವಾಗ ಬ್ಯಾಟಿಂಗ್ ಮಾಡುತ್ತಿದ್ದ ಉಮರ್ ಅಕ್ಮಲ್ ಮೇಲೆ ಸ್ಲೆಡ್ಜಿಂಗ್ ಮಾಡಿ ಒತ್ತಡ ಹೇರಲು ನನ್ನನ್ನು ಧೋನಿ ಛೂ ಬಿಟ್ಟಿದ್ದರು ಎಂದು ರೈನಾ ಹೇಳಿಕೊಂಡಿದ್ದಾರೆ. ಆದರೆ ಅವರು ಚೆಸ್ ಪ್ಲೇಯರ್ ನಂತೆ. ಯಾವಾಗ ಯಾವ ಹೆಜ್ಜೆಯಿಡುತ್ತಾರೆಂದು ನಮಗೆ ಊಹಿಸಲೂ ಸಾಧ್ಯವಿಲ್ಲ ಎಂದು ರೈನಾ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ