ಟೀಂ ಇಂಡಿಯಾಗೆ ಹಂಗಾಮಿ ನಾಯಕನ ಆಯ್ಕೆ ಮಾಡಲು ಈ ವ್ಯಕ್ತಿ ಇಂಗ್ಲೆಂಡ್ ಗೆ ಬರಬೇಕು!

ಮಂಗಳವಾರ, 28 ಜೂನ್ 2022 (09:00 IST)
ಲಂಡನ್: ಖಾಯಂ ನಾಯಕ ರೋಹಿತ್ ಶರ್ಮಾಗೆ ಕೊರೋನಾ ಪಾಸಿಟಿವ್ ಆಗಿರುವುದರಿಂದ ಇಂಗ್ಲೆಂಡ್ ವಿರುದ್ಧ ಏಕೈಕ ಟೆಸ್ಟ್ ಪಂದ್ಯವಾಡಲಿರುವ ಟೀಂ ಇಂಡಿಯಾಗೆ ಹೊಸ ನಾಯಕನ ನೇಮಕವಾಗಬೇಕಿದೆ.

ಜುಲೈ 1 ರಿಂದ ಆರಂಭವಾಗುವ ಟೆಸ್ಟ್ ಪಂದ್ಯದ ವೇಳೆಗೆ ರೋಹಿತ್ ಚೇತರಿಸಿಕೊಳ್ಳುವುದು ಅನುಮಾನ. ಹೀಗಾಗಿ ಅವರ ಸ್ಥಾನಕ್ಕೆ ಹಂಗಾಮಿ ನಾಯಕನ ನೇಮಕವಾಗಿದೆ.

ಆದರೆ ಯಾರು ನಾಯಕನಾಗಬೇಕು ಎಂಬ ಬಗ್ಗೆ ಇನ್ನೂ ಸೂಕ್ತ ತೀರ್ಮಾನವಾಗಿಲ್ಲ. ಸದ್ಯಕ್ಕೆ ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮಾ ಐರ್ಲೆಂಡ್ ನಲ್ಲಿ ಟೀಂ ಇಂಡಿಯಾ ಜೊತೆಗಿದ್ದು, ಅವರು ಇಂಗ್ಲೆಂಡ್ ಗೆ ತೆರಳಿದ ಬಳಿಕ ಹಂಗಾಮಿ ನಾಯಕನ ಘೋಷಣೆಯಾಗಲಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ