ಇಂಗ್ಲೆಂಡ್ ನಿಂದ ಹತ್ತು ಪಟ್ಟು ತೆರಿಗೆ ವಸೂಲಿ ಮಾಡಿದರಂತೆ ಟೀಂ ಇಂಡಿಯಾ ಕ್ರಿಕೆಟಿಗರು!

ಸೋಮವಾರ, 16 ಜನವರಿ 2017 (10:17 IST)
ನವದೆಹಲಿ: ವೀರೇಂದ್ರ ಸೆಹ್ವಾಗ್ ಮತ್ತೊಂದು ಸಿಕ್ಸರ್ ಹೊಡೆದಿದ್ದಾರೆ. ಅದು ಮೈದಾನದಲ್ಲಿ ಅಲ್ಲ. ಟ್ವಿಟರ್ ನಲ್ಲಿ. ಭಾರತ ನಿನ್ನೆ ಇಂಗ್ಲೆಂಡ್ ವಿರುದ್ಧ ಗೆದ್ದಿದ್ದಕ್ಕೆ ಅಮೀರ್ ಖಾನ್ ರ ಲಗಾನ್ ಸಿನಿಮಾವನ್ನು ಹೋಲಿಸಿ ಅದ್ಭುತ ಟ್ವೀಟ್ ಮಾಡಿದ್ದಕ್ಕೆ ಓದುಗರು ಕ್ಲೀನ್ ಬೌಲ್ಡ್ ಆಗಿದ್ದಾರೆ.

“ಭಾರತ ಇಂಗ್ಲೆಂಡ್ ನಿಂದ ಹತ್ತು ಪಟ್ಟು ಲಗಾನ್ (ತೆರಿಗೆ) ವಸೂಲು ಮಾಡಿತು” ಎಂದು ವೀರೂ ಫನ್ನಿ ಟ್ವೀಟ್ ಮಾಡಿದ್ದಾರೆ. ಇದನ್ನು 4 ಕ್ಕೂ ಅಧಿಕ ಮಂದಿ ರಿಟ್ವೀಟ್ ಮಾಡಿದ್ದಾರೆ. ಅಮೀರ್ ಖಾನ್ ಅಭಿನಯದ ಲಗಾನ್ ಸಿನಿಮಾದಲ್ಲಿ ಬ್ರಿಟಿಷರ ವಿರುದ್ಧ ಕ್ರಿಕೆಟ್ ಆಡಿ ತೆರಿಗೆ ವಿನಾಯಿತಿ ಪಡೆಯುವ ಕತೆಯಿದೆ.

ನಿನ್ನೆ ಇಂಗ್ಲೆಂಡ್ ವಿರುದ್ಧ ಗೆದ್ದಿದ್ದಕ್ಕೆ ವೀರೂ ಅದೇ ಸಿನಿಮಾವನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ. ಇನ್ನು ಕೆಲವರು ಬ್ರಿಟಿಷ್ ಪತ್ರಕರ್ತ ಪೀರ್ಸ್ ಮಾರ್ಗನ್ ಜತೆ ಟ್ವಿಟರ್ ವಾರ್ ನಡೆಸುವಂತೆ ವೀರೂಗೆ ಒತ್ತಾಯ ಮಾಡುತ್ತಿದ್ದಾರೆ! ಹಿಂದೊಮ್ಮೆ ಭಾರತದ ಒಲಿಂಪಿಕ್ಸ್ ಮೆಡಲ್ ಗೆದ್ದ ವಿಚಾರದಲ್ಲಿ ವೀರೂ ಕೆಣಕಿ ಮಾರ್ಗನ್ ಚೆನ್ನಾಗಿ ಜಾಡಿಸಿಕೊಂಡಿದ್ದರು.  ಈಗಲೂ ಭಾರತ ಯಾವುದೇ ಕ್ರೀಡೆಯಲ್ಲಿ ಇಂಗ್ಲೆಂಡ್ ವಿರುದ್ಧ ಗೆದ್ದರೆ ಸೆಹ್ವಾಗ್ ಟ್ವೀಟ್ ವಿಶಿಷ್ಟವಾಗಿರುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ