ಕೊಹ್ಲಿಯನ್ನೂ ಮೀರಿಸುವ ಬಿಗ್ ಡ್ಯಾಡೀ ಟೀಂ ಇಂಡಿಯಾದಲ್ಲಿದ್ದಾರೆ!
ಸೋಮವಾರ, 14 ಆಗಸ್ಟ್ 2017 (08:51 IST)
ಕೊಲೊಂಬೊ: ಟೀಂ ಇಂಡಿಯಾದಲ್ಲಿ ವಿರಾಟ್ ಕೊಹ್ಲಿಯೇ ಎಲ್ಲರಿಗಿಂತದೊಡ್ಡವರು ಎಂದು ನೀವು ಅಂದುಕೊಂಡಿದ್ದರೆ ತಪ್ಪು. ಕೊಹ್ಲಿಯನ್ನೂ ಮೀರಿಸುವ ಬಿಗ್ ಡ್ಯಾಡೀ ಇದ್ದಾರೆ.
ಅವರು ಬೇರಾರೂ ಅಲ್ಲ. ಶಿಖರ್ ಧವನ್. ಶ್ರೀಲಂಕಾ ವಿರುದ್ಧ ಶತಕ ಬಾರಿಸಿದ ಮೇಲೆ ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಶಿಖರ್ ಗೆ ಇಂತಹದ್ದೊಂದು ಹೆಸರಿಟ್ಟಿದ್ದಾರೆ.
ಟ್ವಿಟರ್ ನಲ್ಲಿ ಶತಕ ಬಾರಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿದ ರಾಹುಲ್, ಪಾಂಡ್ಯ ಧವನ್ ರನ್ನು ಬಿಗ್ ಡ್ಯಾಡಿ ಎಂದು ಕರೆದಿದ್ದಾರೆ. ಆ ಮೂಲಕ ಕ್ರಿಕೆಟ್ ನ ಗಬ್ಬರ್ ಸಿಂಗ್ ಗೆ ಹೊಸ ಹೆಸರಿಟ್ಟಿದ್ದಾರೆ.