ಮುಂಬೈ: ಟೀಂ ಇಂಡಿಯಾ ಟ್ರೈನರ್ ಶಂಕರ್ ಬಸು ತಮ್ಮ ಸ್ಥಾನಕ್ಕೆ ರಾಜೀನಾಮೆಯಿತ್ತಿದ್ದಾರೆ. ಆದರೆ ಇದಕ್ಕೆ ಬಿಸಿಸಿಐ ಇನ್ನೂ ಅಂಕಿತ ಹಾಕಿಲ್ಲ. ಆದರೆ ರಾಜೀನಾಮಗೆ ನಿಜವಾದ ಕಾರಣ ಟೀಂ ಇಂಡಿಯಾ ಆಟಗಾರರೇ ಎಂದು ಮೂಲಗಳು ಹೇಳುತ್ತಿವೆ.
ಇತ್ತೀಚೆಗೆ ಟೀಂ ಇಂಡಿಯಾ ಆಟಗಾರರು ಒಬ್ಬರಾದ ಮೇಲೆ ಒಬ್ಬರು ಗಾಯಗೊಳ್ಳುತ್ತಿದ್ದಾರೆ. ಆಡುತ್ತಿರುವವರಿಗಿಂತ ಗಾಯಗೊಂಡು ಮನೆಯಲ್ಲಿ ಕೂತಿರುವವರ ಲಿಸ್ಟ್ ದೊಡ್ಡದಿದೆ. ಹೀಗಾಗಿ ಇದಕ್ಕೆಲ್ಲಾ ಶಂಕರ್ ಬಸು ಅವರ ಟ್ರೈನಿಂಗ್ ಪದ್ಧತಿ ಸರಿಯಿಲ್ಲದಿರುವುದೇ ಕಾರಣ ಎಂದು ಕ್ರಿಕೆಟಿಗರು ದೂರಿದ್ದಾರೆನ್ನಲಾಗಿದೆ. ಈ ಹಿನ್ನಲೆಯಲ್ಲಿ ಇಂಗ್ಲೆಂಡ್ ಟೆಸ್ಟ್ ಸರಣಿ ಮುಗಿದ ತಕ್ಷಣ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ತಳೆದರೆನ್ನಲಾಗಿದೆ.
ಇದೀಗ ಶಂಕರ್ ಸ್ಥಾನಕ್ಕೆ ಸುದರ್ಶನ್ ಎಂಬವರನ್ನು ಕರೆತರುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಶಂಕರ್ ಬಗ್ಗೆ ಆಟಗಾರರು ದೂರಿಲ್ಲ ಎಂದು ಬಿಸಿಸಿಐ ಹೇಳುತ್ತಿದೆ. ಆದರೆ ಟ್ರೈನಿಂಗ್ ವಿಧಾನದ ಕುರಿತು ಕೆಲವು ಅಸಮಧಾನ ಇದ್ದಿದ್ದು ನಿಜ ಎಂದಿದೆ. ಶಂಕರ್ ಬಸು ನಾಯಕ ವಿರಾಟ್ ಕೊಹ್ಲಿಯ ಮೆಚ್ಚಿನ ಟ್ರೈನರ್ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ