ಮುಂಬೈ: ಅನಿಲ್ ಕುಂಬ್ಳೆ ಟೀಂ ಇಂಡಿಯಾ ಕೋಚ್ ಆದ ಮೇಲೆ ತಂಡ ಸಾಕಷ್ಟು ಯಶಸ್ಸು ಕಂಡಿದೆ. ತಂಡದ ಆಟಗಾರರು ದಿಗ್ಗಜ ಸ್ಪಿನ್ನರ್ ಕಾರ್ಯವೈಖರಿಯಿಂದ ಖುಷ್ ಆಗಿದ್ದಾರೆ ಎಂದೆಲ್ಲಾ ನಾವು ಅಂದುಕೊಂಡಿರುವುದು ಸುಳ್ಳು ಎನ್ನುತ್ತಿದೆ ಒಂದು ವರದಿ.
ಇತ್ತೀಚೆಗಷ್ಟೇ ಸಣ್ಣ ಪುಟ್ಟ ವಿಷಯಗಳಿಗೆಲ್ಲಾ ಸುಪ್ರೀಂ ಕೋರ್ಟ್ ನೇಮಿಸಿದ ಆಡಳಿತ ಮಂಡಳಿಗೆ ಕುಂಬ್ಳೆ ದೂರುತ್ತಾರೆ ಎಂದು ಬಿಸಿಸಿಐ ಆಕ್ಷೇಪಿಸಿತ್ತು. ಈ ಕಾರಣಕ್ಕೆ ಅವರ ಕೋಚ್ ಗುತ್ತಿಗೆ ಅವಧಿ ಮುಂದುವರಿಸದೇ ಇರಲು ತೀರ್ಮಾನಿಸಿತ್ತು ಎಂದು ವರದಿ ಓದಿದ್ದೆವು.
ಆದರೆ ಹೊಸದೊಂದು ಪತ್ರಿಕಾ ವರದಿಯ ವರದಿಯ ಪ್ರಕಾರ ಕುಂಬ್ಳೆ ಬಗ್ಗೆ ಆಟಗಾರರಲ್ಲೇ ಅಸಮಾಧಾನವಿದೆಯಂತೆ. ಅವರು ಆಟಗಾರರಿಗೆ ಸ್ವಾತಂತ್ರ್ಯ ನೀಡುತ್ತಿಲ್ಲ. ಹೀಗಾಗಿ ನಮಗೆ ಹೊಸ ಕೋಚ್ ಕೊಡಿ ಎಂದು ಬಿಸಿಸಿಐಗೆ ದೂರಿದ್ದಾರೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
ಇತ್ತೀಚೆಗೆ ಕೊಹ್ಲಿ ಕೂಡಾ ಬಿಸಿಸಿಐ ಹೊಸ ಕೋಚ್ ಗಳಿಗೆ ಅರ್ಜಿ ಆಹ್ವಾನಿಸಿದ ಕುರಿತು ಬಿಸಿಸಿಐ ನಿಲುವು ಸಮರ್ಥಿಸಿದ್ದರು. ಅಲ್ಲದೆ ಟೀಂ ಇಂಡಿಯಾ ಯಶಸ್ಸಿಗೆ ಕೋಚ್ ಒಬ್ಬರೇ ಅಲ್ಲ, ಎಲ್ಲರೂ ಸಮಪಾಲುದಾರರು ಎಂದಿದ್ದರು. ಹೀಗಾಗಿ ನಾಯಕ ಮತ್ತು ಕೋಚ್ ನಡುವೆ ಭಿನ್ನಾಭಿಪ್ರಾಯವಿದೆ ಎಂದು ಸುದ್ದಿ ಹಬ್ಬಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ