ಪಾಕ್ ವಿರುದ್ಧ ಆರ್ಮಿ ಕ್ಯಾಪ್ ಹಾಕಿಕೊಂಡು ಟೀಂ ಇಂಡಿಯಾ ಆಡಲಿ!

ಶನಿವಾರ, 9 ಮಾರ್ಚ್ 2019 (09:20 IST)
ಮುಂಬೈ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಏಕದಿನ ಪಂದ್ಯದ ವೇಳೆ ಭಾರತೀಯ ಸೇನೆಯ ಗೌರವಾರ್ಥ ಟೀಂ ಇಂಡಿಯಾ ಆಟಗಾರರು ಆರ್ಮಿ ಕ್ಯಾಪ್ ಧರಿಸಿ ಆಡಿದ್ದರು.


ಅಲ್ಲದೆ, ಈ ಪಂದ್ಯದ ಸಂಭಾವನೆಯನ್ನೂ ಹುತಾತ್ಮ ಯೋಧರ ನೆರವಿಗೆ ನೀಡುವುದಾಗಿ ಘೋಷಿಸಿದ್ದರು. ಭಾರತೀಯ ಆಟಗಾರರ ಈ ನಿಲುವಿಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಅಭಿಮಾನಿಗಳು ಪಾಕಿಸ್ತಾನ ವಿರುದ್ಧ ಪಂದ್ಯವಾಡುವಾಗಲೂ ಇದೇ ಕ್ಯಾಪ್ ಧರಿಸಿ ಆಡಲಿ ಎಂದು ಆಶಿಸಿದ್ದಾರೆ.

ಇತ್ತೀಚೆಗೆ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯು ಸೇನೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಬಳಿಕ ಉಭಯ ದೇಶಗಳ ನಡುವೆ ಯುದ್ಧದ ವಾತಾವರಣ ಮೂಡಿತ್ತು. ಇದಾದ ಬಳಿಕ ಭಾರತ-ಪಾಕಿಸ್ತಾನ ನಡುವಿನ ಕ್ರಿಕೆಟ್ ಸಂಬಂಧಕ್ಕೂ ಕತ್ತರಿ ಹಾಕಬೇಕೆಂದು ಒತ್ತಾಯ ಜೋರಾಗಿದೆ.

ಈ ಎಲ್ಲಾ ಘಟನೆಗಳ ಬೆನ್ನಲ್ಲೇ ಇದೀಗ ಭಾರತೀಯ ಕ್ರಿಕೆಟ್ ತಂಡ ಸೇನಾ ಕ್ಯಾಪ್ ಧರಿಸಿ ಆಡಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಇದು ಒಳ್ಳೆಯ ನಿರ್ಧಾರ. ಇನ್ನು, ಮುಂದಿನ ಎಲ್ಲಾ ಪಂದ್ಯಗಳಲ್ಲಿ ಅದರಲ್ಲೂ ವಿಶೇಷವಾಗಿ ಪಾಕ್ ವಿರುದ್ಧ ವಿಶ್ವಕಪ್ ನಲ್ಲಿ ಆಡುವಂತಿದ್ದರೆ ಈ ಕ್ಯಾಪ್ ಧರಿಸಿಯೇ ಆಡಲಿ ಎಂದು ಆಶಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ