ಕಪಿಲ್ ದೇವ್ ಅವರ ದಾಖಲೆಯನ್ನು ಮುರಿದ ಟೀಂ ಇಂಡಿಯಾ ಬೌಲರ್ ಭುವನೇಶ್ವರ್ ಕುಮಾರ್

ಶನಿವಾರ, 6 ಜನವರಿ 2018 (07:44 IST)
ಕೇಪ್ ಟೌನ್ : ದಕ್ಷಿಣ ಆಫ್ರಿಕಾದ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ನಡೆದಿದ್ದು, ಟೀಂ ಇಂಡಿಯಾ ಬೌಲರ್ ಭುವನೇಶ್ವರ್ ಕುಮಾರ್ ಅವರು ಕಪಿಲ್ ದೇವ್ ಅವರ  ದಾಖಲೆಯನ್ನು ಮುರಿದು ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ.

 
1992-93 ರಲ್ಲಿ ದಕ್ಷಿಣ ಆಪ್ರಿಕಾದ ವಿರುದ್ಧದ ಪಂದ್ಯದಲ್ಲಿ ಟೀಂ ಇಡಿಯಾದ ಕಪಿಲ್ ದೇವ್ ಅವರು ತಾವು ಎಸೆದ ಮೊದಲ ಓವರ್ ನಲ್ಲಿ ಜಿಮ್ಮಿ ಕುಕ್ ವಿಕೆಟ್ ಪಡೆದುಕೊಂಡಿದ್ದರು, ಆನಂತರ ಟೀಂ ಇಂಡಿಯಾದ ಯಾವ ಬೌಲರ್ ಗಳೂ ಈ ದಾಖಲೆ ಮಾಡಿರಲಿಲ್ಲ. ಆದರೆ ನಿನ್ನೆ ನಡೆದ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ತಾವು ಎಸೆದ ಮೊದಲ ಓವರ್ ನಲ್ಲಿ ಡೀಲ್ ಎಲ್ಗರ್ ವಿಕೆಟ್ ಪಡೆದುಕೊಂಡು ಕಪಿಲ್ ದೇವ್ ಅವರ ದಾಖಲೆಯನ್ನು ಮುರಿದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ