ಮೂರನೇ ಏಕದಿನ ಪಂದ್ಯ: ತವರಲ್ಲೇ ಆಸ್ಟೇಲಿಯಾ ಬಗ್ಗು ಬಡಿದ ಪಾಕಿಸ್ತಾನ

Sampriya

ಭಾನುವಾರ, 10 ನವೆಂಬರ್ 2024 (16:34 IST)
Photo Courtesy X
ಕ್ಯಾನ್ಖೆರ್‌: ಇಲ್ಲಿನ ಪರ್ತ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ 8ವಿಕೆಟ್‌ಗಳ ಅಮೋಘ ಜಯ ಸಾಧಿಸಿದೆ.

ಆಸ್ಟ್ರೇಲಿಯಾ ತಂಡವು ಕೇವಲ 140 ರನ್​ಗಳಿಗೆ ಆಲೌಟ್ ಆಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್ ತಂಡದ ನಾಯಕ ಮೊಹಮ್ಮದ್ ರಿಝ್ವಾನ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡವು ನಿರೀಕ್ಷಿತ ಆರಂಭ ಪಡೆಯುವಲ್ಲಿ ವಿಫಲವಾಯಿತು.

141 ರನ್‌ಗಳ ಸುಲಭ ಗುರಿ ಬೆನ್ನತ್ತಿದ್ದ ಪಾಕ್‌ ಬ್ಯಾಟರ್‌ಗಳು ಉತ್ತಮ ಆರಂಭ ಪಡೆಯುವಲ್ಲಿ ಯಶಸ್ವಿಯಾದರು. ಮೊದಲ ವಿಕೆಟ್‌ಗೆ ಪಾಕ್ ‌84 ರನ್‌ಗಳ ಜೊತೆಯಾಟ ನೀಡಿತ್ತು.

ಆರಂಭಿಕರ ವಿಕೆಟ್‌ ಪತನವಾದ ಬಳಿಕ ಕ್ರೀಸ್‌ಗಿಳಿದ ನಾಯಕ ಮೊಹಮ್ಮದ್‌ ರಿಜ್ವಾನ್‌ ಮತ್ತು ಬಾಬರ್‌ ಆಜಂ ಜೋಡಿ ವಿಕೆಟ್‌ ಬಿಟ್ಟುಕೊಡದೇ ತಂಡವನ್ನು ಗೆಲುವಿನ ದಡ ಸೇರಿಸಿದರು.

ಪಾಕಿಸ್ತಾನ ಪರ ಸೈಮ್‌ ಅಯೂಬ್‌ 42 ರನ್‌, ಅಬ್ದುಲ್ಲಾ ಶಫಿಕ್‌ 37 ರನ್‌ಗಳಿಸಿ ಔಟಾದರೆ, ಮೊಹಮ್ಮದ್‌ ರಿಜ್ವಾನ್‌ 30 ರನ್‌ ಹಾಗೂ ಬಾಬರ್‌ ಆಜಂ 28 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ