ವಿಚ್ಚೇದನದಿಂದ ಹಿಂದೆ ಸರಿದ ಸೈನಾ ನೆಹ್ವಾಲ್‌: ದೂರವಾದಾಗಲೇ ಬೆಲೆ ತಿಳಿಯೋದು ಎಂದ ಬ್ಯಾಡ್ಮಿಂಟನ್‌ ತಾರೆ

Sampriya

ಭಾನುವಾರ, 3 ಆಗಸ್ಟ್ 2025 (11:38 IST)
Photo Credit X
ಹೈದರಾಬಾದ್‌: ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್‌ ಮತ್ತು ಪರುಪಳ್ಳಿ ಕಶ್ಯಪ್ ದಂಪತಿ ಕೆಳದಿನಗಳ ಹಿಂದ ವಿಚ್ಛೇದನ ಘೋಷಿಸಿದ್ದರು. ಇದೀಗ ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದು, ಮತ್ತೆ ಒಂದಾಗಿ ಬಾಳಲು ನಿರ್ಧರಿಸಿದ್ದಾರೆ. 

35 ವರ್ಷದ ಸೈನಾ ಅವರು ಇನ್‌ಸ್ಟಾಗ್ರಾಂನಲ್ಲಿ ಖಾತೆಯಲ್ಲಿ ಹೊಸ ಪೋಸ್ಟ್‌ವೊಂದನ್ನು ಹಂಚಿಕೊಳ್ಳುವ ಮೂಲಕ ಮತ್ತೆ ಒಂದಾಗುತ್ತೇವೆಂದು ಘೋಷಿಸಿದ್ದಾರೆ. ಇಬ್ಬರ ಫೋಟೋ ಹೊತೆಗೆ ಕೆಲವೊಮ್ಮೆ ದೂರವಾಗಿರುವುದು ಹತ್ತಿರವಾಗಿರುವ ಮೌಲ್ಯವನ್ನು ಕಲಿಸುತ್ತದೆ, ನಾವು ಮತ್ತೆ ಒಂದಾಗಲು ತೀರ್ಮಾನಿಸಿದ್ದೇವೆ ಎಂದು ಬರೆದುಕೊಂಡಿದ್ದಾರೆ. 

ಬ್ಯಾಡ್ಮಿಂಟನ್‌ ತಾರೆ ಸೈನಾ ನೆಹ್ವಾಲ್ ‌ಅವರು 2018ರಲ್ಲಿ ಬ್ಯಾಡ್ಮಿಂಟನ್‌ ಆಟಗಾರನಾಗಿದ್ದ ಕಶ್ಯಪ್ ಅವರನ್ನ ವಿವಾಹವಾಗಿದ್ದರು. ಕಳೆದ ಜುಲೈ 14ರಂದು ಈ ಜೋಡಿ 7 ವರ್ಷಗಳ ದಾಂಪತ್ಯಕ್ಕೆ ಪೂರ್ಣವಿರಾಮ ನೀಡಲು ನಿರ್ಧರಿಸಿತ್ತು. ಈ ಕುರಿತು ಅವರೇ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು. 

ವಿಶ್ವದ ಮಾಜಿ ಅಗ್ರಮಾನ್ಯ ಆಟಗಾರ್ತಿಯಾಗಿರುವ ಸೈನಾ ನೆಹ್ವಾಲ್ ಅವರು ಒಂದು ದಶಕಕ್ಕೂ ಹೆಚ್ಚು ಕಾಲ ಗೆಳೆಯ, ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿದ್ದ ಪರುಪಳ್ಳಿ ಕಶ್ಯಪ್ ಅವರನ್ನು ಪ್ರೀತಿಸಿ ವರಿಸಿದ್ದರು. ಕಶ್ಯಪ್‌ ಅವರು ಕ್ರೀಡೆಯಿಂದ ನಿವೃತ್ತರಾದ ನಂತರ ಕಶ್ಯಪ್ ಈಗ ತರಬೇತಿ ನೀಡುತ್ತಿದ್ದರೆ ಸೈನಾ ನೆಹ್ವಾಲ್‌ ಇನ್ನೂ ನಿವೃತ್ತಿ ಘೋಷಣೆ ಮಾಡಿಲ್ಲ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ