ತಿಲಕರತ್ನೆ ದಿಲ್ಶಾನ್ ನಿವೃತ್ತಿ: ಯಶಸ್ವಿ ವೃತ್ತಿ ಜೀವನಕ್ಕೆ ಐಸಿಸಿ ಅಭಿನಂದನೆ

ಶನಿವಾರ, 10 ಸೆಪ್ಟಂಬರ್ 2016 (15:15 IST)
ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕ ತಿಲಕರತ್ನೆ ದಿಲ್ಶಾನ್ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಬಳಿಕ ಶುಕ್ರವಾರ ಸೀಮಿತ ಓವರ್‌ಗಳ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರು. ಅತ್ಯಂತ ಯಶಸ್ವಿ ವೃತ್ತಿ ಜೀವನವನ್ನು ಕಂಡ ಅವರಿಗೆ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಅಭಿನಂದನೆಯನ್ನು ಸಲ್ಲಿಸಿದೆ. 
ಎಲ್ಲ ರೂಪದ ಆಟಗಳಲ್ಲಿ ಶತಕ ಸಿಡಿಸಿರುವ 11 ಆಟಗಾರರಲ್ಲಿ ತಿಲಕರತ್ನೆ ಕೂಡ ಒಬ್ಬರು. ಇದು ಆಧುನಿಕ ಕ್ರಿಕೆಟಿಗನ ಹೊಸದನ್ನು ಅಳವಡಿಕೊಳ್ಳುವ ಸಾಮರ್ಥ್ಯದ ಪ್ರತೀಕ ಎಂದು ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡೇವಿಡ್ ರಿಚರ್ಡ್‌ಸನ್ ಹೇಳಿದ್ದಾರೆ. 
 
"ಎಲ್ಲಾ ಮೂರು ಸ್ವರೂಪಗಳ ಕ್ರಿಕೆಟ್‌ನಲ್ಲಿ ದಿಲ್ಶಾನ್ ಅದ್ಭುತ ಆಟಗಾರ. ಒಬ್ಬ ಸಾಲಿಡ್ ಬ್ಯಾಟ್ಸ್‌ಮನ್‌ ಆಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ಅವರು ವೇಗದ ಗತಿಯ ಆಟಕ್ಕೆ ನಿರಾಯಾಸವಾಗಿ ಹೊಂದಿಕೊಂಡರು. ಅಂತರಾಷ್ಟ್ರೀಯ ಮಟ್ಟದ ಏಕದಿನ, ಟ್ವೆಂಟಿ -20ಯಲ್ಲಿ ಅತ್ಯುತ್ತಮ ಆಟಗಾರರಲ್ಲೊಬ್ಬರಾಗಿ ಗುರುತಿಸಿಕೊಂಡರು ಎಂದು ಅವರು ಹೇಳಿದ್ದಾರೆ. 
 
ವಿಭಿನ್ನ ಹೊಡೆತ ಮತ್ತು ವಿನಾಶಕಾರಿ ಆರಂಭಿಕನಾಗಿ ಅವರು ಸದಾ ಸ್ಮರಿಸಲ್ಪಡುತ್ತಾರೆ. ಅತ್ಯುತ್ತಮ ಸ್ಪಿನ್ ಬೌಲರ್ ಮತ್ತು ಮಹೋನ್ನತ ಕ್ಷೇತ್ರರಕ್ಷಣಾಕಾರರು ಕೂಡ. ಅದ್ಭುತ ವೃತ್ತಿಜೀವನವನ್ನು ಕಂಡ ದಿಲ್ಶಾನ್ ಅವರಿಗೆ ನಮ್ಮ ಅಭಿನಂದನೆಗಳು ಮತ್ತು ಭವಿಷ್ಯದಲ್ಲವರು ಸರ್ವ ರೀತಿಯ ಯಶಸ್ಸನ್ನು ಕಾಣಲೆಂದು ಹಾರೈಸುತ್ತೇವೆ ಎಂದು ರಿಚರ್ಡ್‌ಸನ್ ಶುಭ ಕೋರಿದ್ದಾರೆ. 
 
2013ರಲ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದ ದಿಲ್ಶಾನ್ ಜೂನ್ 2009ರಲ್ಲಿ ಟಿ20 ರೂಪದಲ್ಲಿ ಮತ್ತು 2015ರಲ್ಲಿ ಆಲ್ ರೌಂಡರ್ ಆಗಿ ಐಸಿಸಿ ವಿಶ್ವ ಶ್ರೇಯಾಂಕದಲ್ಲಿ ಅಗ್ರ ಸ್ಥಾನಕ್ಕೇರಿದ್ದರು. ಐಸಿಸಿಯ ಶ್ರೇಷ್ಠ ಏಕದಿನ ತಂಡದಲ್ಲಿ ನಾಲ್ಕು ವರ್ಷ (2009, 2011, 2013, 2015) ಆಯ್ಕೆಯಾಗಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ