ಕೆಎಲ್ ರಾಹುಲ್ ಗೆ ಜೈ ಶಿಖರ್ ಧವನ್ ಗೆ ಬೆಂಡೆತ್ತಿದ ಟ್ವಿಟರಿಗರು
ಶಿಖರ್ ಧವನ್ ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿರುವುದಕ್ಕೆ ಟ್ರೋಲ್ ಗೊಳಗಾಗಿದ್ದಾರೆ. ಅವರ ಬದಲು ಅದ್ಭುತ ಫಾರ್ಮ್ ನಲ್ಲಿರುವ ಕೆಎಲ್ ರಾಹುಲ್ ರನ್ನೇ ಏಕದಿನದಲ್ಲೂ ಆರಂಭಿಕರಾಗಿ ಆಡಿಸಬೇಕು ಎಂದು ಟ್ವಿಟರಿಗರು ಒತ್ತಾಯಿಸಿದ್ದಾರೆ. ಇತ್ತೀಚೆಗೆ ನಾಯಕ ಕೊಹ್ಲಿ ಕೂಡಾ ರಾಹುಲ್ ಗೆ ವಿಶ್ವಕಪ್ ಗೆ ಮೊದಲು ಹೆಚ್ಚು ಅವಕಾಶ ನೀಡುವುದಾಗಿ ಹೇಳಿದ್ದಾರೆ. ಹಾಗಾಗಿ ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಪಂದ್ಯಕ್ಕೆ ಕನ್ನಡಿಗ ಬ್ಯಾಟ್ಸ್ ಮನ್ ತಂಡಕ್ಕೆ ಮರಳಿದರೂ ಅಚ್ಚರಿಯೇನಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.