ಭಾರತ-ಪಾಕಿಸ್ತಾನ ವಿಶ್ವಕಪ್ ನಲ್ಲಿ ಆಡಬೇಕು ಎಂದ ಸಚಿವ

ಸೋಮವಾರ, 4 ಮಾರ್ಚ್ 2019 (09:12 IST)
ಮುಂಬೈ: ಮುಂಬರುವ ಏಕದಿನ ವಿಶ್ವಕಪ್ ನಲ್ಲಿ ಭಾರತ ಪಾಕಿಸ್ತಾನ ವಿರುದ್ಧ ಪಂದ್ಯವಾಡಬೇಕೋ, ಬಹಿಷ್ಕರಿಸಬೇಕೋ ಎಂಬ ಚರ್ಚೆಗಳ ಬೆನ್ನಲ್ಲೇ ಹರ್ಯಾಣದ ಕ್ರೀಡಾ ಸಚಿವ ಅನಿಲ್ ವಿಜ್ ಮಹತ್ವದ ಹೇಳಿಕೆ ನೀಡಿದ್ದಾರೆ.


2019 ರ ವಿಶ್ವಕಪ್ ಕೂಟದಲ್ಲಿ ಭಾರತ ಪಾಕ್ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಬೇಕು ಎಂದು ಹಲವು ಮಾಜಿ ಕ್ರಿಕೆಟಿಗರು, ಅಭಿಮಾನಿಗಳೂ ಒತ್ತಾಯಿಸುತ್ತಿದ್ದರೆ, ಇತ್ತ ಅನಿಲ್ ವಿಜ್ ಭಾರತ ಪಂದ್ಯ ಬಹಿಷ್ಕರಿಸಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಒಂದು ವೇಳೆ ಭಾರತ ಪಂದ್ಯ ಬಹಿಷ್ಕರಿಸಿದರೆ ವೃಥಾ ಪಾಕಿಸ್ತಾನಕ್ಕೆ ನಾವೇ ಮುನ್ನಡೆ ನೀಡಿದಂತಾಗುತ್ತದೆ. ಐಸಿಸಿ ವಿಶ್ವಕಪ್ ಎನ್ನುವುದು ವಿವಿಧ ರಾಷ್ಟ್ರಗಳು ಭಾಗವಹಿಸುವ ಕೂಟ. ಯಾವುದೇ ದೇಶ ಎದುರಾದರೂ ಭಾರತ ಆಡಬೇಕು. ನಾವ್ಯಾಕೆ ಹಿಂದೆ ಸರಿಯಬೇಕು? ಭಾರತ ಈ ಮಹತ್ವದ ಕೂಟದಲ್ಲಿ ಪಾಕ್ ವಿರುದ್ಧ ಆಡಿ ಅವರನ್ನು ಸೋಲಿಸಬೇಕು’ ಎಂದು ಅನಿಲ್ ವಿಜ್ ಹೇಳಿದ್ದಾರೆ.

ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಕೂಡಾ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅವರ ಹೇಳಿಕೆ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ