ರಣಜಿ ಸೋತ ಬಳಿಕ ಅಭಿಮಾನಿಗಳಿಗೆ ಕರ್ನಾಟಕ ಆಟಗಾರ ವಿನಯ್ ಕುಮಾರ್ ಟ್ವೀಟ್

ಬುಧವಾರ, 30 ಜನವರಿ 2019 (09:18 IST)
ಬೆಂಗಳೂರು: ಸೌರಾಷ್ಟ್ರ ವಿರುದ್ಧ ನಡೆದ ರಣಜಿ ಟ್ರೋಫಿ ಸೆಮಿಫೈನಲ್ ನಲ್ಲಿ ಸೋತ ಬಳಿಕ ಕರ್ನಾಟಕ ಆಟಗಾರ ವಿನಯ್ ಕುಮಾರ್ ಅಭಿಮಾನಿಗಳಿಗೆ ಟ್ವಿಟರ್ ನಲ್ಲಿ ಸಂದೇಶ ನೀಡಿದ್ದಾರೆ.


ಸೆಮಿಫೈನಲ್ ನಲ್ಲಿ ಕಳಪೆ ಅಂಪಾಯರಿಂಗ್ ಮತ್ತು ಚೇತೇಶ್ವರ ಪೂಜಾರ ಅವರ ಸನ್ನಡತೆ ಮರೆತ ಆಟದಿಂದಾಗಿ ಸೋತಿದ್ದ ಕರ್ನಾಟಕಕ್ಕೆ ಈಗ ಅಭಿಮಾನಿಗಳು ಅನುಕಂಪ ವ್ಯಕ್ತಪಡಿಸುತ್ತಿದ್ದಾರೆ.

ಈ ನಡುವೆ ಟ್ವೀಟ್ ಮಾಡಿರುವ ವಿನಯ್ ಕುಮಾರ್ ‘ಕರ್ನಾಟಕ ತಂಡವನ್ನು ಬೆಂಬಲಿಸಿದ ಎಲ್ಲಾ ಕನ್ನಡಿಗರಿಗೂ ಧನ್ಯವಾದ. ಈ ಋತು ನಮ್ಮ ಪಾಲಿಗೆ ಶ್ರೇಷ್ಠವಾಗಿತ್ತು. ನಿಮ್ಮ ನಿಸ್ವಾರ್ಥ ಪ್ರೀತಿಗೆ ಧನ್ಯವಾದ. ದುರದೃಷ್ಟವಶಾತ್ ನಾವು ಫೈನಲ್ ಗೇರಲು ಸಾಧ್ಯವಾಗಲಿಲ್ಲ. ಮುಂದಿನ ವರ್ಷ ಆ ಸಾಧನೆ ಮಾಡುವ ಭರವಸೆಯಿದೆ. ಇದೇ ರೀತಿ ಬೆಂಬಲಿಸುತ್ತಿರಿ’ ಎಂದು ವಿನಯ್ ಟ್ವೀಟ್ ಮುಖಾಂತರ ಹೇಳಿದ್ದಾರೆ. ವಿನಯ್ ಈ ಟ್ವೀಟ್ ಗೆ ಹಲವರು ಕಾಮೆಂಟ್ ಮಾಡಿ ಬೆಂಬಲಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ