ಗೆಲುವಿನ ಬಳಿಕ ಮಸಾಲೆ ದೋಸೆ ಸವಿದ ವಿರಾಟ್ ದಂಪತಿ

ಬುಧವಾರ, 8 ಸೆಪ್ಟಂಬರ್ 2021 (08:55 IST)
ಲಂಡನ್: ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯ ಗೆದ್ದ ಬಳಿಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಂಪತಿ ದಕ್ಷಿಣ ಭಾರತೀಯ ಶೈಲಿಯ ಆಹಾರ ಸವಿದು ಖುಷಿಪಟ್ಟಿದ್ದಾರೆ.


ಅನುಷ್ಕಾ ಲಂಡನ್ ನಲ್ಲಿ ದಕ್ಷಿಣ ಭಾರತದ ಫೇಮಸ್ ತಿನಿಸು ಮಸಾಲೆ ದೋಸೆ, ರವಾ ದೋಸೆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ‘ಹೋಮ್ ಅವೇ ಫ್ರಂ ಹೋಮ್’ ಎಂದು ಬರೆದುಕೊಂಡಿದ್ದಾರೆ.

ಕಳೆದ ಬಾರಿ ಟೆಸ್ಟ್ ಪಂದ್ಯ ಗೆಲುವಿನ ಬಳಿಕ ಕೊಹ್ಲಿ ದಂಪತಿ ಭಾರತೀಯ ರೆಸ್ಟೋರೆಂಟ್ ಒಂದಕ್ಕೆ ತೆರಳಿ ಭೋಜನ ಮಾಡಿ ಸಂಭ್ರಮಾಚರಿಸಿದ್ದರು. ಈ ಬಾರಿ ಮಸಾಲೆ ದೋಸೆ ಸವಿದು ಸಂಭ್ರಮಪಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ