ಪಾರ್ಟಿಗೆ ಬಂದಿದ್ದ ವಿಜಯ್ ಮಲ್ಯ ಕಡೆಗೆ ತಿರುಗಿಯೂ ನೋಡದ ವಿರಾಟ್ ಕೊಹ್ಲಿ ಪಡೆ!
ಮಲ್ಯರೊಂದಿಗಿನ ಭೇಟಿ ತಪ್ಪಿಸುವುದಕ್ಕಾಗಿಯೇ ವಿರಾಟ್ ಕೊಹ್ಲಿ ಸೇರಿದಂತೆ ಟೀಂ ಇಂಡಿಯಾ ಆಟಗಾರರು ಪಾರ್ಟಿಯಿಂದ ಬೇಗನೇ ನಿರ್ಗಮಿಸಿದರು ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಅದಾಗಲೇ ಪಂದ್ಯ ನಡೆಯುತ್ತಿದ್ದಾಗ ವಿಐಪಿ ಗ್ಯಾಲರಿಯಲ್ಲಿ ಕುಳಿತಿದ್ದ ಮಲ್ಯ ಫೋಟೋ ಸಾಕಷ್ಟು ವಿವಾದ ಉಂಟುಮಾಡಿದ ಹಿನ್ನಲೆಯಲ್ಲಿ ಮತ್ತೊಂದು ವಿವಾದವಾಗದಂತೆ ಟೀಂ ಇಂಡಿಯಾ ಆಟಗಾರರು ಅವರನ್ನು ಭೇಟಿಯಾಗಲೇ ಇಲ್ಲ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.