ವಿರಾಟ್ ಕೊಹ್ಲಿಯಿಂದ ಮತ್ತೊಂದು ವಿಶ್ವ ದಾಖಲೆ

ಮಂಗಳವಾರ, 20 ಫೆಬ್ರವರಿ 2018 (17:23 IST)
ಸೆಂಚೂರಿಯನ್: ಟೆಸ್ಟ್ ಮತ್ತು ಏಕದಿನ ಪಂದ್ಯದಲ್ಲಿ 900 ರೇಟಿಂಗ್ ಪಾಯಿಂಟ್ ಗಿಂತ ಅಧಿಕ ಅಂಕ ಗಳಿಸಿದ ವಿರಾಟ್ ಕೊಹ್ಲಿ ಹೊಸ ದಾಖಲೆ ಬರೆದಿದ್ದಾರೆ.
 

 ಈ ದಾಖಲೆ ಮಾಡಿದ ವಿಶ್ವದ ಎರಡನೇ ಮತ್ತು ಭಾರತದ ಪ್ರಥಮ ಬ್ಯಾಟ್ಸ್ ಮನ್ ಎಂಬ ಗೌರವಕ್ಕೆ ಕೊಹ್ಲಿ ಪಾತ್ರರಾಗಿದ್ದಾರೆ. ದ.ಆಫ್ರಿಕಾದ ಎಬಿಡಿ ವಿಲಿಯರ್ಸ್ ಇದಕ್ಕೂ ಮೊದಲು ಈ ಸಾಧನೆ ಮಾಡಿದ್ದಾರೆ.

ಕೊಹ್ಲಿ ಇದೀಗ ಐಸಿಸಿಯ ಆಲ್ ಟೈಮ್ ರ್ಯಾಂಕಿಂಗ್ ಪಟ್ಟಿಯಲ್ಲೂ ಬ್ರಿಯಾನ್ ಲಾರಾರನ್ನು ಹಿಂದಕ್ಕಿ ಏಕದಿನ ಕ್ರಿಕೆಟ್ ಮಾದರಿಯಲ್ಲಿ 7 ನೇ ಸ್ಥಾನಕ್ಕೇರಿದ್ದಾರೆ. ಬೌಲರ್ ಗಳ ಪಟ್ಟಿಯಲ್ಲೂ ಭಾರತ ಜಸ್ಪ್ರೀತ್ ಬುಮ್ರಾ, ಆಫ್ಗನ್ ನ ಅಬ್ದುಲ್ ರಶೀದ್ ಜತೆಗೆ ಜಂಟಿಯಾಗಿ ನಂ.1 ಸ್ಥಾನ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ