ಭರ್ಜರಿ ಶತಕದ ಜತೆಗೆ ದ.ಆಫ್ರಿಕಾದಲ್ಲಿ ವಿರಾಟ್ ಕೊಹ್ಲಿ ಮಾಡಿದ ದಾಖಲೆಯಿದು!

ಸೋಮವಾರ, 15 ಜನವರಿ 2018 (15:08 IST)
ಸೆಂಚೂರಿಯನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದ.ಆಫ್ರಿಕಾ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ತಮ್ಮ ಅನುಭವವನ್ನೆಲ್ಲಾ ಧಾರೆಯೆರೆದು ಆಡುತ್ತಿದ್ದು, ಭರ್ಜರಿ ಶತಕ ಗಳಿಸಿ ತಂಡವನ್ನು ಆಧರಿಸಿದ್ದಾರೆ.
 

ವಿರಾಟ್ ಕೊಹ್ಲಿ ತಮ್ಮ ಟೆಸ್ಟ್ ಬಾಳ್ವೆಯ 21 ನೇ ಶತಕ ದಾಖಲಿಸಿದರು. ನಾಯಕನಾಗಿ ಇದು ಅವರ 14 ನೇ ಶತಕ. ಕಷ್ಟದ ಸಂದರ್ಭದಲ್ಲಿ ತಾಳ್ಮೆಯಿಂದ ಬಂದ ಶತಕವಾದ್ದರಿಂದ ಇದು ಕೊಹ್ಲಿ ಶತಕಗಳ ಸಾಲಿನಲ್ಲಿ ವಿಶೇಷವಾಗಿದೆ.

ಇದರೊಂದಿಗೆ ಕೊಹ್ಲಿ ನಾಯಕನಾಗಿ ದ.ಆಫ್ರಿಕಾ ನೆಲದಲ್ಲಿ ಸಚಿನ್ ತೆಂಡುಲ್ಕರ್ ನಂತರ ಶತಕ ದಾಖಲಿಸಿದ ದ್ವಿತೀಯ ಭಾರತೀಯ ಎನಿಸಿದರು. ಡಾನ್ ಬ್ರಾಡ್ಮನ್, ಕ್ಲೈವ್ ಲಾಯ್ಡ್, ಬ್ರಿಯಾನ್ ಲಾರಾ, ಮಹೇಲಾ ಜಯವರ್ಧನೆ ಮತ್ತು ಮೈಕಲ್ ಕ್ಲಾರ್ಕ್ ನಂತರ ನಾಯಕನಾಗಿ 14 ಟೆಸ್ಟ್ ಶತಕ ಗಳಿಸಿದ ದಾಖಲೆ ಕೊಹ್ಲಿ ಪಾಲಾಗಿದೆ. ಇದೀಗ 128 ರನ್ ಗಳಿಸಿ ಕೊಹ್ಲಿ ತಮ್ಮ ಆಟ ಮುಂದುವರಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ