ವಿರಾಟ್ ಕೊಹ್ಲಿ ಪೆಪ್ಸಿಕೊ ಸಂಸ್ಥೆಗೆ ಕೈಕೊಟ್ಟಿದ್ದೇಕೆ ಗೊತ್ತಾ?!

ಬುಧವಾರ, 7 ಜೂನ್ 2017 (10:46 IST)
ಮುಂಬೈ: ವಿರಾಟ್ ಕೊಹ್ಲಿ ಇನ್ನು ಮುಂದೆ ಸಾಫ್ಟ್ ಡ್ರಿಂಕ್ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳಲ್ಲ. ಪೆಪ್ಸಿಕೊ ಸಂಸ್ಥೆಯೊಂದಿಗಿನ ತಮ್ಮ ಆರು ವರ್ಷದ ಒಪ್ಪಂದಕ್ಕೆ ಅಂತ್ಯ ಹಾಡಿದ್ದಾರೆ. ಕೊಹ್ಲಿ ಯಾಕೆ ಹೀಗೆ ಮಾಡಿದರು?

 
ಕೊಹ್ಲಿ ಫಿಟ್ ನೆಸ್, ಆರೋಗ್ಯದ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸುತ್ತಾರೆ ಎಂದು ಎಲ್ಲರಿಗೂ ಗೊತ್ತು. ಹಾಗಾಗಿ ಆರೋಗ್ಯಕ್ಕೆ ಉತ್ತಮವಲ್ಲದ, ಫಿಟ್ ನೆಸ್ ಕಾಯ್ದುಕೊಳ್ಳಲು ಅಗತ್ಯವಲ್ಲದ, ಹಾಗೂ ತಮಗೆ ಸಂಬಂಧವೇ ಇಲ್ಲದ ಉತ್ಪನ್ನಗಳ ರಾಯಭಾರಿಯಾಗುವುದಿಲ್ಲ ಎಂದು ಕೊಹ್ಲಿ ನಿರ್ಧರಿಸಿದ್ದಾರಂತೆ.

ಅದಕ್ಕೇ ಪೆಪ್ಸಿ ಜತೆಗಿನ ತಮ್ಮ ಒಪ್ಪಂದ ಮುಂದುವರಿಸದೇ ಇರಲು ತೀರ್ಮಾನಿಸಿದ್ದಾರೆ. ಅಲ್ಲದೆ ಪೆಪ್ಸಿಯಂತಹದ್ದೇ ಸಾಫ್ಟ್ ಡ್ರಿಂಕ್ ಉತ್ಪನ್ನಗಳಿಗೆ ಇನ್ನು ಮುಂದೆ ರಾಯಭಾರಿಯಾಗದೇ ಇರಲು ನಿರ್ಧರಿಸಿದ್ದಾರೆ.

‘ನಾನೇ ಅಂತಹ ಉತ್ಪನ್ನಗಳನ್ನು ಸೇವಿಸುವುದಿಲ್ಲವೆಂದ ಮೇಲೆ ಇತರರಿಗೆ ಸೇವಿಸಿ ಎಂದು ಹೇಳಲಾರೆ. ಅಂತಹ ಉತ್ಪನ್ನಗಳನ್ನು ನಾನು ಪ್ರಚಾರ ಮಾಡುವುದೂ ಇಲ್ಲ’ ಎಂದು ಕೊಹ್ಲಿ ಹೇಳಿದ್ದಾರೆ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ