ಸುರೇಶ್ ರೈನಾ ಬ್ಯಾಟಿಂಗ್ ರೆಕಾರ್ಡ್ ಮುರಿದ ವಿರಾಟ್ ಕೊಹ್ಲಿ

ಸೋಮವಾರ, 30 ಮೇ 2016 (12:33 IST)
ವಿರಾಟ್ ಕೊಹ್ಲಿ ಅವರಿಗೆ ಈ ಅವಧಿಯ ಐಪಿಎಲ್ ಅಭಿಯಾನದಲ್ಲಿ ಸಿಹಿ, ಕಹಿ ಎರಡೂ ಸಿಕ್ಕಿದೆ. ಅವರ ವೈಯಕ್ತಿಕ ಫಾರಂ ಅದ್ಭುತವಾಗಿದ್ದರೂ ತಮ್ಮ ತಂಡವನ್ನು ಭಾನುವಾರ ನಡೆದ ಫೈನಲ್ಸ್‌ನಲ್ಲಿ ಗೆಲ್ಲಿಸಲಾಗಲಿಲ್ಲ ಎಂಬ ಕೊರಗು ಅವರನ್ನು ಕಾಡುತ್ತಿದೆ.
 
 27 ವರ್ಷ ವಯಸ್ಸಿನ ಆಟಗಾರ 16 ಪಂದ್ಯಗಳಿಂದ 973 ರನ್‌ಗಳೊಂದಿಗೆ  81.08 ಸರಾಸರಿಯೊಂದಿಗೆ 1000 ರನ್ ಗಡಿಯನ್ನು ದಾಟಲು ಕೇವಲ 27 ರನ್ ಕೊರತೆ ಅನುಭವಿಸಿದರು.
 
ಆದಾಗ್ಯೂ ಡೆಲ್ಲಿ ಬ್ಯಾಟ್ಸ್‌ಮನ್   ಸನ್ ರೈಸರ್ಸ್ ವಿರುದ್ಧ 54 ರನ್ ಸ್ಕೋರ್ ಮಾಡುವ ಮೂಲಕ ಗಮನಾರ್ಹ ದಾಖಲೆಯನ್ನು ಮುರಿದರು. ಐಪಿಎಲ್ ಸರ್ವಕಾಲಿಕ ಅತೀ ಹೆಚ್ಚು ರನ್ ಸ್ಕೋರ್ ಮಾಡಿದ ಸುರೇಶ್ ರೈನಾ ಅವರ ದಾಖಲೆಯನ್ನು ಕೊಹ್ಲಿ ಮುರಿದರು.
ಅವರ ದಾಖಲೆಯನ್ನು ಮುರಿಯಲು ಕೊಹ್ಲಿಗೆ 44 ರನ್ ಅಗತ್ಯವಿತ್ತು.ರೈನಾ 147 ಪಂದ್ಯಗಳಲ್ಲಿ 4,098 ರನ್ ಸ್ಕೋರ್ ಮಾಡಿದ್ದರು. ಆದರೆ ವಿರಾಟ್ 139ಪಂದ್ಯಗಳಲ್ಲಿ 4,110 ರನ್ ಸ್ಕೋರ್ ಮಾಡಿ ದಾಖಲೆಯನ್ನು ಮುರಿದರು.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.
 

ವೆಬ್ದುನಿಯಾವನ್ನು ಓದಿ