ಎಷ್ಟೋ ದಿನದಿಂದ ಕಾಯುತ್ತಿದ್ದ ಶತಕ ಕೊನೆಗೂ ವಿರಾಟ್ ಕೊಹ್ಲಿಯ ಕೈಗೆಟುಕಿತು

ಸೋಮವಾರ, 12 ಆಗಸ್ಟ್ 2019 (09:43 IST)
ಪೋರ್ಟ್ ಆಫ್ ಸ್ಪೇನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇತ್ತೀಚೆಗಿನ ದಿನಗಳಲ್ಲಿ ಶತಕ ಗಳಿಸಿದ್ದು ಕಡಿಮೆ. ರನ್ ಮೆಷಿನ್ ಯಾಕೋ ಅರ್ಥಶತಕ ಗಳಿಸಿ ಔಟಾಗುತ್ತಿದ್ದುದು ಅವರಿಗೇ ಹತಾಶೆಯನ್ನುಂಟು ಮಾಡಿತ್ತು. ಹೇಗಾದರೂ ಸರಿ, ಶತಕ ಗಳಿಸಿಯೇ ತೀರಬೇಕು ಎಂದು ಕಾಯುತ್ತಿದ್ದ ಕೊಹ್ಲಿಗೆ ಕೊನೆಗೂ ಅದು ನಿನ್ನೆ ಸಾಧ‍್ಯವಾಯಿತು.


ಹೀಗಾಗಿ ಸಹಜವಾಗಿಯೇ ಕೊಹ್ಲಿ ನಿರಾಳರಾಗಿದ್ದಾರೆ. ಹಲವು ದಿನಗಳಿಂದ ಶತಕ ಗಳಿಸಲು ಕಾಯುತ್ತಿದ್ದೆ. ಕೊನೆಗೂ ಅದು ಈಡೇರಿತು ಎಂದು ಕೊಹ್ಲಿ ಪಂದ್ಯದ ಬಳಿಕ ಹೇಳಿಕೊಂಡಿದ್ದಾರೆ.

‘ರೋಹಿತ್, ಧವನ್ ಬೇಗನೇ ಔಟ್ ಆದರು. ಹೀಗಾಗಿ ರನ್ ಗಳಿಸುವ ಅವಕಾಶ ನನ್ನದಾಯಿತು. ಅದನ್ನು ಸರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗಿದ್ದಕ್ಕೆ ಖುಷಿಯಾಗಿದೆ’ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ. ವಿಶೇಷವೆಂದರೆ ಕೊಹ್ಲಿ ಈಗ ಏಕದಿನ ಪಂದ್ಯಗಳಲ್ಲಿ 42 ಶತಕ ಗಳಿಸಿದ್ದು, ಇನ್ನು 8 ಶತಕ ಗಳಿಸಿದರೆ ಸಚಿನ್ ತೆಂಡುಲ್ಕರ್ ಅವರ ಏಕದಿನದಲ್ಲಿ ಅತೀ ಹೆಚ್ಚು ಶತಕ ಗಳಿಸಿದ ವಿಶ್ವದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಳ್ಳಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ