ವಿಶ್ವ ದಾಖಲೆ ಮಾಡಲು 19 ರನ್ ದೂರದಲ್ಲಿ ವಿರಾಟ್ ಕೊಹ್ಲಿ

ಭಾನುವಾರ, 11 ಆಗಸ್ಟ್ 2019 (11:22 IST)
ಗಯಾನ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದು ನಡೆಯಲಿರುವ ದ್ವಿತೀಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ಹೊಸ ವಿಶ್ವ ದಾಖಲೆ ಮಾಡುವ ಸನಿಹದಲ್ಲಿದ್ದಾರೆ.


ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಪಂದ್ಯಗಳಲ್ಲಿ ಗರಿಷ್ಠ ಏಕದಿನ ರನ್ ಮಾಡಿದ ವಿಶ್ವ ದಾಖಲೆ ಮಾಡಲು ಕೊಹ್ಲಿಗೆ ಇನ್ನು 19 ರನ್ ಸಾಕು. ಈ ದಾಖಲೆ ಸದ್ಯಕ್ಕೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಜಾವೇದ್ ಮಿಯಾಂದಾದ್ ಹೆಸರಿನಲ್ಲಿದೆ.

ಜಾವೇದ್ 1930 ರನ್ ಗಳಿಸಿದ್ದರು. ಕೊಹ್ಲಿ ಈಗ 1912 ರನ್ ಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ. ಹೀಗಾಗಿ ಇನ್ನು 19 ರನ್ ಗಳಿಸಿದರೆ ಆ ವಿಶ್ವದಾಖಲೆ ಮುರಿದು ಬೀಳಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ