ನಾಲ್ಕನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಬದಲಾವಣೆ

ಸೋಮವಾರ, 30 ಆಗಸ್ಟ್ 2021 (09:05 IST)
ಲಂಡನ್: ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ದಯನೀಯ ಬ್ಯಾಟಿಂಗ್ ವೈಫಲ್ಯ ಕಂಡ ಬೆನ್ನಲ್ಲೇ ನಾಯಕ ವಿರಾಟ್ ಕೊಹ್ಲಿ ತಂಡದ ಆಡುವ ಬಳಗದಲ್ಲಿ ಬದಲಾವಣೆ ತರುವ ಸುಳಿವು ನೀಡಿದ್ದಾರೆ.


ಮೂರನೇ ಟೆಸ್ಟ್ ನ ಮೊದಲ ಇನಿಂಗ್ಸ್ ನಲ್ಲಿ ಭಾರತ ಕೇವಲ 78 ರನ್ ಗಳಿಗೆ ಆಲೌಟ್ ಆಗಿತ್ತು. ಎರಡನೇ ಇನಿಂಗ್ಸ್ ನಲ್ಲೂ ದಿಡೀರ್ ಬ್ಯಾಟಿಂಗ್ ಕುಸಿತ ಕಂಡಿತ್ತು.

ಇದೇ ಆಟಗಾರರೂ ಎಲ್ಲಾ ಪಂದ್ಯಗಳನ್ನು ಆಡುತ್ತಾರೆ ಎಂಬುದಕ್ಕೆ ಗ್ಯಾರಂಟಿ ಇಲ್ಲ. ನಾವು ಪ್ರತಿಯೊಬ್ಬ ಆಟಗಾರನೊಂದಿಗೂ ಮಾತನಾಡುತ್ತೇವೆ. ಯಾರಿಗೆ ಸಮಯ ಕೊಡಬೇಕು, ಐದನೇ ಟೆಸ್ಟ್ ಗೆ ತಯಾರಾಗಬೇಕು ಎಂಬುದನ್ನು ನಾವು ಚರ್ಚಿಲಿದ್ದೇವೆ’ ಎಂದು ಕೊಹ್ಲಿ ಹೇಳಿದ್ದಾರೆ. ಈ ಮೂಲಕ ಮಧ್ಯಮ ಕ್ರಮಾಂಕಕ್ಕೆ ಮೇಜರಿ ಸರ್ಜರಿ ಮಾಡುವ ಸುಳಿವು ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ