ವಿರಾಟ್ ಕೊಹ್ಲಿಗೆ ಪ್ರಬುದ್ಧತೆಯೇ ಇಲ್ಲ ಎಂದ ದ.ಆಫ್ರಿಕಾ ವೇಗಿ
ಹಿಂದಿನ ಘಟನೆಯೊಂದನ್ನು ಉದಾಹರಣೆಯಾಗಿ ನೀಡಿದ ರಬಾಡ ‘ಅವರು ನನ್ನ ಬೌಲಿಂಗ್ ನಲ್ಲಿ ಬೌಂಡರಿ ಗಳಿಸಿದ ಮೇಲೆ ನಾನು ನನ್ನ ಮುಂದಿನ ಗೇಮ್ ಪ್ಲ್ಯಾನ್ ಬಗ್ಗೆ ಯೋಚಿಸುತ್ತಿದ್ದೆ. ಆಗ ಅವರೇ ನನ್ನ ಬಳಿ ಬಂದು ವಾಗ್ವಾದ ನಡೆಸಿದರು. ನಾನು ಅದಕ್ಕೆ ತಿರುಗೇಟು ನೀಡಿದಾಗ ಅವರಿಗೆ ಸಿಟ್ಟು ಬಂತು. ಬಹುಶಃ ಇದುವೇ ಅವರಿಗೆ ಪ್ರೇರಣೆಯಾಗುತ್ತದೆ ಎನಿಸುತ್ತದೆ. ನನ್ನ ಪ್ರಕಾರ ಅವರು ಉತ್ತಮ ಆಟಗಾರನೇ ಇರಬಹುದು, ಆದರೆ ನಿಂದನೆಗಳನ್ನು ಎದುರಿಸುವ ಪ್ರಬುದ್ಧತೆ ಇಲ್ಲ’ ಎಂದು ರಬಾಡ ಹೇಳಿದ್ದಾರೆ.