ವಿರಾಟ್ ಕೊಹ್ಲಿ ಮಹಾನ್ ನಾಯಕ: ಬ್ರೆಟ್ ಲೀ

ಮಂಗಳವಾರ, 20 ಸೆಪ್ಟಂಬರ್ 2016 (14:48 IST)
ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮಹಾನ್ ನಾಯಕ ಎಂದು ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಬ್ರೇಟ್ ಲೀ ಹಾಡಿಹೊಗಳಿದ್ದಾರೆ. 
ನವದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಲೀ,"ಇದೇ ತಿಂಗಳಿಂದ ಆರಂಭವಾಗಲಿರುವ ನ್ಯೂಜಿಲೆಂಡ್-ಭಾರತ ಟೆಸ್ಟ್ ಪಂದ್ಯವನ್ನು ಉಲ್ಲೇಖಿಸಿ ಮಾತನ್ನಾಡಿದರು.ಇದು ಒಂದು ಅದ್ಭುತ ಸ್ಪರ್ಧೆಯಾಗಲಿದೆ. ಇದರಲ್ಲಿ ಭಾರತ ಮೈಲುಗೈ ಸಾಧಿಸಬಹುದು. ವಿರಾಟ್ ಕೊಹ್ಲಿ ತಂಡದ ಸಂರಚನೆಯನ್ನೇ ಬದಲಾಯಿಸಬಲ್ಲರು . ಇದು ಒಂದು ಸಮತೋಲಿತ ತಂಡ. ಕೊಹ್ಲಿ ಮಹಾನ್ ನಾಯಕ. ತಂಡ ಆತನನ್ನು ಗೌರವಿಸುತ್ತದೆ, " ಎಂದು ಲೀ ಹೊಗಳಿದ್ದಾರೆ. 
 
ಭಾರತ ತಂಡ ಟೆಸ್ಟ್ ಕ್ರಿಕೆಟ್‌ನಲ್ಲಿ ಉತ್ತಮ ಸ್ಥಿತಿಯಲ್ಲಿದೆ. ಬೌಲಿಂಗ್ ಈ ಋತುವಿನಲ್ಲಿ ಬಹಳ ಮುಖ್ಯ ಪಾತ್ರವಹಿಸಲಿದೆ. ಬೌಲರ್‌ಗಳೇ ಭಾರತಕ್ಕೆ ಸರಣಿಯನ್ನು ಗೆಲ್ಲಿಸಿಕೊಡಲಿದ್ದಾರೆ ಎಂದು ಲೀ ಭವಿಷ್ಯ ನುಡಿದಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ