ರೋಹಿತ್ ಶರ್ಮಾ ಬಗ್ಗೆ ಹೇಳಿಕೆ: ಟೀಕೆಗೊಳಗಾದ ವಿರಾಟ್ ಕೊಹ್ಲಿ

ಶುಕ್ರವಾರ, 27 ನವೆಂಬರ್ 2020 (11:28 IST)
ಸಿಡ್ನಿ: ರೋಹಿತ್ ಶರ್ಮಾ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳುವ ವಿಚಾರವಾಗಿ ಮಾಧ್ಯಮಗೋಷ್ಠಿಯಲ್ಲಿ ಕೇಳಿದ ಪ್ರಶ್ನೆಗೆ ಸರಿಯಾಗಿ ಉತ್ತರ ನೀಡದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈಗ ನೆಟ್ಟಿಗರು ಮಾತ್ರವಲ್ಲ, ಮಾಜಿ ಕ್ರಿಕೆಟಿಗರಿಂದಲೂ ಟೀಕೆಗೊಳಗಾಗಿದ್ದಾರೆ.


ರೋಹಿತ್ ಶರ್ಮಾ ತಂಡಕ್ಕೆ ಮರಳುವ ಬಗ್ಗೆ ಪತ್ರಕರ್ತರು ಕೇಳಿದಾಗ ‘ಅವರ ಗಾಯದ ಬಗ್ಗೆ ಮತ್ತು ಅವರು ಚೇತರಿಸಿಕೊಂಡಿರುವ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ’ ಎಂದು ಕೊಹ್ಲಿ ಹೇಳಿರುವುದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಮಾಜಿ ವೇಗಿ ಆಶಿಷ್ ನೆಹ್ರಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ರೋಹಿತ್ ಮತ್ತು ಕೊಹ್ಲಿ ನಡುವೆ ಸಂವಹನ ಕೊರತೆಯಿರುವುದು ಬೇಸರದ ಸಂಗತಿ ಎಂದಿದ್ದಾರೆ. ಇನ್ನೊಂದೆಡೆ ಮನೋಜ್ ತಿವಾರಿ ಟ್ವೀಟ್ ಮೂಲಕ ಪರೋಕ್ಷವಾಗಿ ಕೊಹ್ಲಿಗೆ ತಿವಿದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ