ಈ ಮಹಿಳಾ ಆಟಗಾರ್ತಿಯನ್ನು ನೋಡುವುದೇ ಕೊಹ್ಲಿಗಿಷ್ಟವಂತೆ!
ಹಾಗಂತ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಬ್ಯಾಡ್ಮಿಂಟನ್ ಎಂದರೆ ನನಗಿಷ್ಟ. ಬಹುಶಃ ಕ್ರಿಕೆಟ್ ಆಡಿರದೇ ಇದ್ದಿದ್ದರೆ ಬ್ಯಾಡ್ಮಿಂಟನ್ ಆಟಗಾರನಾಗುತ್ತಿದ್ದೆ ಎಂದ ಕೊಹ್ಲಿ ತಮ್ಮ ಇಷ್ಟದ ಮಹಿಳಾ ಮತ್ತು ಪುರುಷ ಬ್ಯಾಡ್ಮಿಂಟನ್ ಆಟಗಾರರು ಯಾರು ಎಂದು ಬಹಿರಂಗಪಡಿಸಿದ್ದಾರೆ.
ಪಿವಿ ಸಿಂದು ಮತ್ತು ಕಿದಂಬಿ ಶ್ರೀಕಾಂತ್ ಆಡುವುದನ್ನು ನೋಡಲು ನನಗಿಷ್ಟ ಎಂದು ಕೊಹ್ಲಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಸಿಂದು ಆಟವೆಂದರೆ ಕೊಹ್ಲಿಗೆ ಅಚ್ಚುಮೆಚ್ಚಂತೆ.