ಇಂದು ವಿರಾಟ್ ಕೊಹ್ಲಿ ಮಾಡಲಿರುವ ಆ ಸ್ಪೆಷಲ್ ಅನೌನ್ಸ್ ಮೆಂಟ್ ಏನು?!

ಸೋಮವಾರ, 1 ಮೇ 2017 (08:20 IST)
ಮುಂಬೈ: ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಪ್ರೇಮಿಗಳು ಎನ್ನುವುದು ಈಗ ಗುಟ್ಟಾಗಿ ಉಳಿದಿಲ್ಲ. ಈ ಜೋಡಿಯ ಮದುವೆ ಯಾವಾಗ ಎಂಬ ದೊಡ್ಡ ಪ್ರಶ್ನೆಗೆ ಇಂದು ಉತ್ತರ ಸಿಗುವ ಸಾಧ್ಯತೆಯಿದೆ.

 
ಯಾಕೆಂದರೆ ಇಂದು ಅನುಷ್ಕಾ ಬರ್ತ್ ಡೇ. ಈವತ್ತು ವಿರಾಟ್ ತಮ್ಮ ಪ್ರೀತಿಯ ಹುಡುಗಿಗೆ ಮದುವೆ ಪ್ರಸ್ತಾಪವಿಡುತ್ತಾರೆ ಎಂಬ ಸುದ್ದಿಗಳು ಹಬ್ಬಿವೆ. ವಿರಾಟ್ ಜನುಮದಿನಕ್ಕೆ ಅನುಷ್ಕಾ ರಾಜ್ ಕೋಟ್ ಗೆ ಖುದ್ದಾಗಿ ಬಂದು ಸ್ಪೆಷಲ್ಲಾಗಿ ಬರ್ತ್ ಡೇ ಆಚರಿಸಿಕೊಂಡಿದ್ದರು.

ಇದೀಗ ವಿರಾಟ್ ಸರದಿ. ಅನುಷ್ಕಾಗೆ ಯಾವ ರೀತಿ ವಿರಾಟ್ ಸರ್ಪ್ರೈಸ್ ಕೊಡುತ್ತಾರೆ ಎಂದು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಇತ್ತೀಚೆಗಷ್ಟೇ ವಿರಾಟ್ ತಮ್ಮ ಇನ್ ಸ್ಟಾಗ್ರಾಂ ಮುಖಪುಟಕ್ಕೆ ಅನುಷ್ಕಾ ಫೋಟೋ ಹಾಕಿದ್ದರು. ಇದೀಗ ಬರ್ತ್ ಡೇ ದಿನವಾದರೂ ಆ ಸ್ಪೆಷಲ್ ಅನೌನ್ಸ್ ಮೆಂಟ್ ಬರುತ್ತಾ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ