ಜನವರಿಯಲ್ಲಿ ರೆಸ್ಟ್ ಮಾಡಲಿದ್ದಾರಂತೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ
ತಮ್ಮ ವೈಯಕ್ತಿಕ ವಿಶೇಷ ದಿನಗಳನ್ನು ಎಂಜಾಯ್ ಮಾಡಲು ಕೊಹ್ಲಿ ಈ ಅವಧಿಯಲ್ಲಿ ಕಳೆದ ವರ್ಷವೂ ಬಿಡುವು ಪಡೆದಿದ್ದರು. ಈ ವರ್ಷವೂ ಅದು ಮುಂದುವರಿಯುವ ಸಾಧ‍್ಯತೆಯಿದೆ ಎನ್ನಲಾಗಿದೆ. ಮಾರ್ಚ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯೂ ಇರುವುದರಿಂದ ಹೆಚ್ಚಿನ ಒತ್ತಡ ಬೀಳದಂತೆ ಬಾಂಗ್ಲಾ ವಿರುದ್ಧ 3 ಪಂದ್ಯಗಳಿಂದ ಅವರಿಗೆ ವಿಶ್ರಾಂತಿ ನೀಡಲು ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಚಿಂತನೆ ನಡೆಸಿದೆ.