ತೆಂಡೂಲ್ಕರ್‌ಗೆ ಹೋಲಿಕೆ ಮಾಡುವುದು ಮುಜುಗರ ಉಂಟುಮಾಡುತ್ತೆ: ವಿರಾಟ್ ಕೊಹ್ಲಿ

ಗುರುವಾರ, 19 ಮೇ 2016 (16:18 IST)
ವಿರಾಟ್ ಕೊಹ್ಲಿ ಅವರ ದೈತ್ಯ ಬ್ಯಾಟಿಂಗ್ ಫಾರಂ ಐಪಿಎಲ್ 2016ರಲ್ಲಿ ಗಮನಸೆಳೆದಿದೆ. ರಾಯಲ್ ಚಾಲೆಂಜರ್ಸ್ ಕೊಹ್ಲಿ ಅವರ ಅಚ್ಚರಿಯ ಬ್ಯಾಟಿಂಗ್ ನೆರವಿನಿಂದ ಪಂದ್ಯಾವಳಿಯ ಪ್ಲೇಆಫ್‌ನಲ್ಲಿ ಸ್ಥಾನಕ್ಕೆ ಚೇಸ್ ಮಾಡುತ್ತಿದೆ. ಕೊಹ್ಲಿ ಇತ್ತೀಚೆಗೆ ಒಂದಾದ ಮೇಲೊಂದು ದಾಖಲೆಯನ್ನು ಮುರಿದಿದ್ದಾರೆ. ಆರ್‌ಸಿಬಿ ಟೀಮ್ ಮೇಟ್ ಎಬಿ ಡಿ ವಿಲಿಯರ್ಸ್ ಜತೆ ಜತೆಯಾಟದಿಂದ ಗುಜರಾತ್ ಲಯನ್ಸ್‌ನಂತ ದೊಡ್ಡ ತಂಡವನ್ನು ಕಂಗೆಡಿಸಿದೆ.
 
ಗುಜರಾತ್ ಲಯನ್ಸ್ ವಿರುದ್ಧ ಐಪಿಎಲ್ ಅತ್ಯಧಿಕ ಸ್ಕೋರಾದ 248 ರನ್‌ಗಳನ್ನು ಕೊಹ್ಲಿ ಮತ್ತು ಡಿ ವಿಲಿಯರ್ಸ್ ಜತೆಯಾಟದಲ್ಲಿ ರಾಯಲ್ ಕಲೆಹಾಕಿತು. ಇದಕ್ಕೆ ಮುಂಚೆ, ಕೊಹ್ಲಿ ಮೂರು ಐಪಿಎಲ್ ಸೀಸನ್‌ಗಳಲ್ಲಿ 500ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ನಾಯಕರೆನಿಸಿದರು. ಸಚಿನ್ ತೆಂಡೂಲ್ಕರ್ ಈ ಸಾಧನೆಯನ್ನು ಎರಡು ಬಾರಿ ಮಾಡಿದ್ದರು.

ತೆಂಡೂಲ್ಕರ್ ಜತೆ ಅವರ ಹೋಲಿಕೆ ಅನಿವಾರ್ಯವಾದರೂ  ತೆಂಡೂಲ್ಕರ್ ಜತೆ ಹೋಲಿಕೆ ಮಾಡುವುದು ತಮಗೆ ಮುಜುಗರವಾಗುತ್ತದೆ ಎಂದು ಕೊಹ್ಲಿ ಹೇಳಿದರು.  ತೆಂಡೂಲ್ಕರ್ ಅವರ ಲೆಜಂಡರಿ ಪ್ರಭೆಗೆ ಕಳಂಕ ತರುವ ಯಾವುದೇ ಮಾತನ್ನು ಅವರು ಒಪ್ಪಲಿಲ್ಲ.
 
ತೆಂಡೂಲ್ಕರ್ ಅವರಿಗೂ ತಮಗೂ ಹೋಲಿಸುವುದು ಸರಿಯಲ್ಲ. ನೀವು ಭಿನ್ನ ಕೌಶಲ್ಯದ ಬ್ಯಾಟ್ಸ್‌ಮನ್ ಕುರಿತು ಮಾತನಾಡುತ್ತಿದ್ದೀರಿ. ನಾನು ನನ್ನ ಆಟವನ್ನು ಬಲಪಡಿಸಿಕೊಂಡೆ, ಆದರೆ ಅವರು ಸಾಧಿಸುವುದಕ್ಕೋಸ್ಕರ ಹುಟ್ಟಿದ್ದಾರೆ. ನಾನು ಎರಡು ವರ್ಷಗಳಿಂದ ಚೆನ್ನಾಗಿ ಆಡುತ್ತಿದ್ದರೆ ತೆಂಡೂಲ್ಕರ್ 24 ವರ್ಷಗಳ ಕಾಲ ಕ್ರಿಕೆಟ್‌‌ಗೆ ಸೇವೆ ಸಲ್ಲಿಸಿದ್ದಾರೆ ಎಂದು ಗಮನಸೆಳೆದರು.

ವೆಬ್ದುನಿಯಾವನ್ನು ಓದಿ