ಧೋನಿ ಹೆಸರು ಕೂಗಬೇಡಿ! ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಹೀಗೆ ತಾಕೀತು ಮಾಡಿದ್ದೇಕೆ?

ಶುಕ್ರವಾರ, 6 ಡಿಸೆಂಬರ್ 2019 (09:45 IST)
ಹೈದರಾಬಾದ್: ಧೋನಿ ಎಂದರೆ ಯಾವತ್ತಿಗೂ ತನ್ನ  ನಾಯಕ, ಆದರ್ಶ ಎನ್ನುವ ವಿರಾಟ್ ಕೊಹ್ಲಿ ಯಾವುದೇ ಕಾರಣಕ್ಕೂ ಧೋನಿ ಹೆಸರು ಕೂಗಿ ಅವಮಾನ ಮಾಡಬೇಡಿ ಎಂದಿದ್ದಾರೆ! ಆದರೆ ಯಾಕೆ ಹೀಗೆ ಹೇಳಿದರು ಗೊತ್ತಾ?


ಕೊಹ್ಲಿ ಹೀಗೆ ಹೇಳಿದ್ದು ರಿಷಬ್ ಪಂತ್ ರನ್ನು ಅಣಕಿಸುವ ಅಭಿಮಾನಿಗಳಿಗೆ. ಪಂತ್ ವಿಕೆಟ್ ಕೀಪಿಂಗ್ ನಲ್ಲಿ ವೈಫಲ್ಯ ಅನುಭವಿಸಿದಾಗಲೆಲ್ಲಾ ಧೋನಿಗೆ ಹೋಲಿಸಿ ಲೇವಡಿ ಮಾಡುತ್ತಾರೆ. ಆದರೆ ನಾಳೆಯಿಂದ ವಿಂಡೀಸ್ ವಿರುದ್ಧ ಟಿ20 ಸರಣಿ ಆರಂಭವಾಗಲಿದ್ದು, ಪಂತ್ ವೈಫಲ್ಯವಾದಾಗ ಅವರಿಗೆ ಈ ರೀತಿ ಟಾಂಗ್ ಕೊಡಬೇಡಿ ಎಂದು ಮನವಿ ಮಾಡಿದ್ದಾರೆ.

‘ರಿಷಬ್ ರ ಸಾಮರ್ಥ್ಯ ನಮಗೆ ಗೊತ್ತು. ಒಂದು ವೇಳೆ ಅವರು ವಿಫಲರಾದಾಗ ಮೈದಾನದಲ್ಲಿ ಅಭಿಮಾನಿಗಳು ಧೋನಿ ಹೆಸರು ಕರೆದು ಅವರಿಗೆ ಅವಮಾನ ಮಾಡಬೇಡಿ. ಇದು ಯಾವುದೇ ಆಟಗಾರನಿಗೆ ತೋರುವ ಅಗೌರವ. ನಮ್ಮದೇ ದೇಶದಲ್ಲಿ ಆಡುವಾಗ ನಮಗೆ ಬೆಂಬಲ ನೀಡಬೇಕು’ ಎಂದು ಕೊಹ್ಲಿ ತಾಕೀತು ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ