ವೀರೇಂದ್ರ ಸೆಹ್ವಾಗ್ ಇನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸೂತ್ರಧಾರ

ಮಂಗಳವಾರ, 24 ಜನವರಿ 2017 (08:46 IST)
ನವದೆಹಲಿ: ಟ್ವಿಟರ್ ನಲ್ಲಿ ಇಷ್ಟು ದಿನ ಮನರಂಜನೆ ಒದಗಿಸುತ್ತಿದ್ದ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಇನ್ನು ಮುಂದೆ ಫುಲ್ ಬ್ಯುಸಿಯಾಗಲಿದ್ದಾರೆ. ಐಪಿಎಲ್ ನ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸೂತ್ರಧಾರನಾಗಲಿದ್ದಾರೆ.
 

ಅಂದರೆ ತಂಡದ ಕಾರ್ಯನಿರ್ವಾಹಕ ಮತ್ತು ಕೌಶಲ್ಯ ಮುಖ್ಯಸ್ಥನಾಗಿ ಕೆಲಸ ಮಾಡಲಿದ್ದಾರೆ. ಮುಂಬರುವ ಐಪಿಎಲ್ ಋತುವಿನಿಂದ ಅವರು ಈ ಕರ್ತವ್ಯ ನಿರ್ವಹಿಸಲಿದ್ದಾರೆ. ಸಂಜಯ್ ಬಂಗಾರ್ ರಿಂದ ತೆರವಾದ ಕೋಚ್ ಹುದ್ದೆಗೆ ಸೆಹ್ವಾಗ್ ಆಯ್ಕೆಯಾಗುತ್ತಾರೆ ಎಂದಿತ್ತು. ಆದರೆ ಕೋಚ್ ಆಗಿಅಲ್ಲದೆ ಕಾರ್ಯನಿರ್ವಾಹಕ ಹುದ್ದೆ ನಿರ್ವಹಿಸಲಿದ್ದಾರೆ.

“ಇಂತಹ ತಂಡದ ನೇತೃತ್ವ ವಹಿಸುವುದಕ್ಕೆ ಖುಷಿಯಾಗುತ್ತಿದೆ ಮತ್ತು ಇದು ನನಗೆ ಸಿಕ್ಕಿದ ಗೌರವ. ಇವರೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ” ಎಂದು ಸೆಹ್ವಾಗ್ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ