ಮಾರ್ಗನ್ ಟ್ವೀಟ್ ಕುರಿತ ಚರ್ಚೆಗೆ ಆಹ್ವಾನ ತಳ್ಳಿ ಹಾಕಿದ ಸೆಹ್ವಾಗ್

ಶನಿವಾರ, 3 ಸೆಪ್ಟಂಬರ್ 2016 (16:04 IST)
ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಇತ್ತೀಚಿಗೆ ಟ್ವಿಟರ್‌ನಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. 
ಕ್ರಿಕೆಟಿಗರ ಜನ್ಮದಿನಗಳಂದು ಫನ್ನಿ ಸ್ಟೈಲ್‌ಲ್ಲಿ ಶುಭ ಹಾರೈಸುವ ಮೂಲಕ, ಭಾರತದ ಓಲಂಪಿಕ್ಸ್ ಸಂಭ್ರಮದ ಬಗ್ಗೆ ಕೆಣಕಿದ್ದ ಇಂಗ್ಲೆಂಡ್ ಪತ್ರಕರ್ತ ಪಿಯರ್ಸ್ ಮಾರ್ಗನ್‌ಗೆ ತಕ್ಕ ಪ್ರತ್ಯುತ್ತರ ನೀಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಕೆಲ ತಿಂಗಳಿಂದ ಅವರು ಭಾರೀ ಸದ್ದು ಮಾಡುತ್ತಿದ್ದಾರೆ. 


 
ಮಾರ್ಗನ್ ಟ್ವೀಟ್‌ ಬಗ್ಗೆ ಪ್ರತಿಕ್ರಿಯಿಸಲು ತಮ್ಮ ಪ್ರೈಮ್ ಶೋ‌ನಲ್ಲಿ ಚರ್ಚೆಗೆ ಬನ್ನಿ ಎಂದು ಪ್ರಮುಖ ಸುದ್ದಿ ವಾಹಿನಿ ನೀಡಿದ್ದ ಆಹ್ವಾನವೊಂದನ್ನು ತಳ್ಳಿ ಹಾಕಿ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. 
 
ಅರ್ನಬ್ ಗೋ ಸ್ವಾಮಿ, ಆ ಬ್ರಿಟಿಷ್ ವ್ಯಕ್ತಿಯ ಬಗ್ಗೆ ಮಾತನಾಡಲು ಕರೆಯುತ್ತಿದ್ದಾರೆ. ಆದರೆ ಆ ವ್ಯಕ್ತಿ (ಮಾರ್ಗನ್) ಅಂತಹ ದೊಡ್ಡ ಚರ್ಚೆಗೊಳಪಡಲು ಲಾಯಕ್ಕಲ್ಲ. ಹೀಗಾಗಿ ನಾನು ಆಹ್ವಾನವನ್ನು ತಿರಸ್ಕರಿಸಿದ್ದೇನೆ ಎಂದು ಸೆಹ್ವಾಗ್ ತಮ್ಮ ನಿರಾಕರಣೆಯ ಹಿಂದಿನ ಕಾರಣವನ್ನು ತಿಳಿಸಿದ್ದಾರೆ. 
 
ಓಲಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದಿದ್ದಕ್ಕೆ ಭಾರತ ಅತಿಯಾಗಿ ಸಂಭ್ರಮಿಸುತ್ತಿದೆ ಎಂದು ಮಾರ್ಗನ್ ವ್ಯಂಗ್ಯವಾಡಿದ್ದಕ್ಕೆ ಕೆರಳಿದ್ದ ಸೆಹ್ವಾಗ್, ವಿಶ್ವಕ್ಕೆ ಕ್ರಿಕೆಟ್ ಪರಿಚಯಿಸಿದ ಇಂಗ್ಲೆಂಡ್‌ಗೆ ಒಂದೇ ಒಂದು ವಿಶ್ವ ಕಪ್ ಎತ್ತಿ ಹಿಡಯಲಾಗಿಲ್ಲ ಎಂದು ಪ್ರತಿ ಏಟು ನೀಡಿದ್ದರು. ಆ ಬಳಿಕ ಕೂಡ ಮಾರ್ಗನ್ ಸೆಹ್ವಾಗ್ ಅವರನ್ನು ಪ್ರಚೋದಿಸಲು ಪದೇ ಪದೇ ಪ್ರಯತ್ನಿಸುತ್ತಿದ್ದರೂ ಅದಕ್ಕೆ ಪ್ರತಿಕ್ರಿಯಿಸದೇ ಸೆಹ್ವಾಗ್ ಮೌನವಾಗಿದ್ದಾರೆ. 

ವೆಬ್ದುನಿಯಾವನ್ನು ಓದಿ