ಧೋನಿ ಆಡುವ ಬಳಗದಿಂದ ಕೈಬಿಟ್ಟ ಬೇಸರದಲ್ಲಿ ನಿವೃತ್ತಿಗೆ ಮುಂದಾಗಿದ್ದರಂತೆ ವೀರೇಂದ್ರ ಸೆಹ್ವಾಗ್
ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಆರಂಭಿಕ ಪಂದ್ಯಗಳಲ್ಲಿ ಸೆಹ್ವಾಗ್ ಹೇಳಿಕೊಳ್ಳುವಷ್ಟು ರನ್ ಗಳಿಸಿರಲಿಲ್ಲ. ಹೀಗಾಗಿ ಅವರನ್ನು ಕೆಲವು ಪಂದ್ಯಗಳಿಗೆ ಆಡುವ ಬಳಗದಿಂದ ಧೋನಿ ಕೈ ಬಿಟ್ಟಿದ್ದರಂತೆ. ಈ ನೋವು ಸೆಹ್ವಾಗ್ ಗೆ ಕಾಡಿತ್ತು.
ಈ ಕಾರಣಕ್ಕೆ ಅವರು ನಿವೃತ್ತಿ ಘೋಷಿಸಲು ಮುಂದಾಗಿದ್ದರಂತೆ. ಆದರೆ ಸಚಿನ್ ಈಗ ನಿನ್ನ ಕೆಟ್ಟ ಗಳಿಗೆ ನಡೆಯುತ್ತಿದೆ. ಈಗ ನಿವೃತ್ತಿ ಘೋಷಿಸಬೇಡ. ಕೆಲವು ದಿನ ಕಾದು ಮನೆಗೆ ಹೋದ ಮೇಲೆ ಎಲ್ಲಿ ಎಡವಿದೆ ಎಂದು ನಿಧಾನವಾಗಿ ಯೋಚಿಸಿ ನಿರ್ಧರಿಸು ಎಂದಿದ್ದರು. ಅದೃಷ್ಟವಶಾತ್ ನಾನು ಆವತ್ತು ತಪ್ಪು ನಿರ್ಧಾರ ಮಾಡಲಿಲ್ಲ ಎಂದು ಸೆಹ್ವಾಗ್ ಹೇಳಿದ್ದಾರೆ.