ನಾಥನ್ ಕೋಲ್ಟರ್ ನೈಲ್ ಎಸೆತಕ್ಕೆ ಹಾರಿದ ಜಾರ್ಜ್ ಬೈಲಿ ಹೆಲ್ಮೆಟ್

ಬುಧವಾರ, 18 ಮೇ 2016 (19:20 IST)
ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಡೇರ್‌ಡೆವಿಲ್ಸ್ ನಡುವೆ ಪಂದ್ಯದಲ್ಲಿ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಜಾರ್ಜ್ ಬೈಲಿಗೆ ನಾತನ್ ಕೌಲ್ಟರ್ ನೈಲ್ ಎಸೆದ ಚೆಂಡು ನೇರವಾಗಿ ಹೆಲ್ಮೆಟ್‌ ಗ್ರಿಲ್‌ಗೆ ಬಡಿದು ಹೆಲ್ಮೆಟ್ ಮೇಲಕ್ಕೆ ಹಾರಿ ಕೆಳಗೆ ಬಿತ್ತು.

ಆ ಕ್ಷಣವು ಟ್ರಕ್ ವೊಂದು ಮುಖಕ್ಕೆ ಬಡಿದ ಹಾಗಾಗಿತ್ತು ಎಂದು ಬೈಲಿ ಕಾಮೆಂಟ್ ಮಾಡಿದರು. ಮರುಕ್ಷಣವೇ  ಆತಂಕದ ಛಾಯೆ ಮೂಡಿ ಫೀಲ್ಡರುಗಳು ತಕ್ಷಣವೇ ಬೈಲಿಯತ್ತ ಧಾವಿಸಿ ಅವರು ಸ್ವಸ್ಥರಾಗಿದ್ದಾರೆಯೇ ಎಂದು ಪರೀಕ್ಷಿಸಿದರು. 
 
ಇನ್ನಿಂಗ್ಸ್ ಏಳನೇ ಓವರಿನಲ್ಲಿ ಕೌಲ್ಟರ್ ನೈಲ್ ಶಾರ್ಟ್ ಬಾಲ್ ಬೈಲಿಗೆ ಎಸೆದಾಗ  ಚೆಂಡು ಬ್ಯಾಟಿನ ತುದಿಗೆ ತಾಗಿ ಬೈಲಿಯ ಹೆಲ್ಮೆಟ್‌ಗೆ ಬಡಿದು ಹೆಲ್ಮೆಟ್ ತಲೆಯಿಂದ ಎಗರಿ ವಿಕೆಟ್ ಹಿಂದೆ ಬಿದ್ದಿತ್ತು. 
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ