ವಿರಾಟ್ ಕೊಹ್ಲಿ ಬಾಲಕನಾಗಿದ್ದಾಗ ಆಶಿಶ್ ನೆಹ್ರಾ ಜತೆಗಿನ ಚಿತ್ರ ಭಾರೀ ಹಿಟ್

ಗುರುವಾರ, 26 ಮೇ 2016 (15:17 IST)
ನವದೆಹಲಿ:  ಆಶಿಷ್ ನೆಹ್ರಾ ಜತೆ ವಿರಾಟ್ ಕೊಹ್ಲಿಯ ಬಾಲ್ಯದ ದಿನದ ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ಭಾರೀ ಹಿಟ್ ಆಗಿದೆ. ಕೊಹ್ಲಿ ಬಾಲಕನಾಗಿದ್ದಾಗ ಆಶಿಷ್ ನೆರ್ಹಾ ಕೊಹ್ಲಿಗೆ ಟ್ರೋಫಿ ನೀಡುತ್ತಿರುವಾಗ ಅವನ ಜತೆ ಚಿತ್ರ ತೆಗೆಸಿಕೊಂಡಿದ್ದರು. ಈ ಚಿತ್ರದ ಕುರಿತು ಮಾತನಾಡಿದ ಆಶಿಶ್ ನೆಹ್ರಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೊಹ್ಲಿಯ ಸಾಧನೆಯಿಂದ ಈ ಚಿತ್ರವು ವೈರಲ್ ಆಗಿ ಹರಿದಾಡುತ್ತಿದೆ. ಇಲ್ಲದಿದ್ದರೆ ಇದೊಂದು ಗೋಡೆಯ ಮೇಲಿನ ಚಿತ್ರವಾಗಿ ಯಾರೂ ಮೆಚ್ಚಿಗೆ ಸೂಚಿಸುತ್ತಿರಲಿಲ್ಲ ಎಂದು ನೆಹ್ರಾ ಹೇಳಿದ್ದಾರೆ.
 
ಈ ಛಾಯಾಚಿತ್ರವನ್ನು ಸುಮಾರು 13 ವರ್ಷಗಳ ಹಿಂದೆ ತೆಗೆದ ಸಂದರ್ಭದಲ್ಲಿ ಯಾರೂ ಈ ಚಿತ್ರದತ್ತ ಗಮನಹರಿಸಿರಲಿಲ್ಲ. ನಾನು 2009-11ರಲ್ಲಿ ಆಡುವಾಗ ವಿರಾಟ್ ಕೂಡ ಆಡುತ್ತಿದ್ದರು. ಆಗ ಯಾರೊಬ್ಬರೂ ಚಿತ್ರದ ಬಗ್ಗೆ ಮಾತನಾಡಿರಲಿಲ್ಲ.

ಆದರೆ ವಿರಾಟ್ ಕ್ರಿಕೆಟ್ ರಂಗದಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿದ ಮೇಲೆ  ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಕಾರಣದಿಂದ ಈ ಚಿತ್ರ ಸದ್ದುಮಾಡುತ್ತಿದೆ ಎಂದು ಡೆಲ್ಲಿ ವೇಗಿ ಹೇಳಿದರು.  ಆಶಿಶ್ ನೆರ್ಹಾ ಲಂಡನ್‌ನಲ್ಲಿ ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.
 

ವೆಬ್ದುನಿಯಾವನ್ನು ಓದಿ