ಆಸ್ಟ್ರೇಲಿಯಾ ಸರಣಿಗೆ ಬಾಲ್ ಬಾಯ್ ಆಗಿದ್ದ ರವಿಚಂದ್ರನ್ ಅಶ್ವಿನ್!

ಶುಕ್ರವಾರ, 17 ಫೆಬ್ರವರಿ 2017 (09:47 IST)
ಚೆನ್ನೈ: ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಗಾಗಿ ರವಿಚಂದ್ರನ್ ಅಶ್ವಿನ್ ಕಠಿಣ ತಾಲೀಮು ನಡೆಸುತ್ತಿದ್ದಾರೆ. ಆದರೆ 2001 ರಲ್ಲಿ ಆಸ್ಟ್ರೇಲಿಯಾ ಭಾರತದಲ್ಲಿ ಟೆಸ್ಟ್ ಪಂದ್ಯವಾಡಿದ್ದಾಗ ಅಶ್ವಿನ್ ಎಲ್ಲಿದ್ದರು ಗೊತ್ತೇ?

 
ಇದೀಗ ಎದುರಾಳಿಗಳು ಬೌಲಿಂಗ್ ನ ಡಾನ್ ಬ್ರಾಡ್ಮನ್ ಎಂದು ಕರೆಯಿಸಿಕೊಳ್ಳುವ ರವಿಚಂದ್ರನ್ ಅಶ್ವಿನ್ ಆಗ ಆಸೀಸ್ ತಂಡ ಚೆನ್ನೈಯಲ್ಲಿ ಟೆಸ್ಟ್ ಪಂದ್ಯವಾಡುವಾಗ ಬೌಂಡರಿ ಗೆರೆ ಬಳಿ ನಿಂತು ಚೆಂಡು ಹಿಡಿಯುವ ಬಾಲ್ ಬಾಯ್ ಆಗಿ ಕೆಲಸ ಮಾಡಿದ್ದರಂತೆ!

ಹಾಗಂತ ಸ್ವತಃ ಅಶ್ವಿನ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.  ವಿಚಿತ್ರ ನೋಡಿ. ಈ ಸರಣಿಯಲ್ಲಿ ಆಸೀಸ್ ತಂಡ ಅದೇ ಅಶ್ವಿನ್ ರನ್ನು ಎದುರಿಸುವುದು ಹೇಗೆಂದು ತಲೆಕೆಡಿಸಿಕೊಂಡು ಕೂತಿದೆ. ಅದೇ ಅಲ್ವಾ ಕಾಲದ ಮಹಿಮೆ? ಸದ್ಯ ಕಠಿಣ ತಾಲೀಮು ನಡೆಸುತ್ತಿರುವ ಅಶ್ವಿನ್ ಪ್ರತಿಷ್ಠಿತ ಸರಣಿಗೆ ಎಲ್ಲಾ ರೀತಿಯಿಂದ ಸಿದ್ಧರಾಗುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ