ದಾಖಲೆಯನ್ನು ಮುರಿಯುತ್ತೇನೆಂದು ಭಯಪಟ್ಟ ಲಾರಾ: ಗೇಲ್ ಆತ್ಮಚರಿತ್ರೆ

ಸೋಮವಾರ, 13 ಜೂನ್ 2016 (16:12 IST)
ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ತಮ್ಮ ಆತ್ಮಚರಿತ್ರೆ ಸಿಕ್ಸ್ ಮೆಷಿನ್: ಐ ಡೋಂಟ್ ಲೈಕ್ ಕ್ರಿಕೆಟ್, ಐ ಲವ್ ಇಟ್" ನಲ್ಲಿ ತಾವು ಬ್ರಿಯಾನ್ ಲಾರಾ ದಾಖಲೆಯನ್ನು ಮುರಿಯಬಹುದೆಂದು ಅವರು ಚಡಪಡಿಸಿದ ಸಂಗತಿಯನ್ನು ಬರೆದಿದ್ದಾರೆ.  2004ರಲ್ಲಿ ಲಾರಾ ಇಂಗ್ಲೆಂಡ್ ವಿರುದ್ಧ 400 ರನ್ ವೈಯಕ್ತಿಕ ಸ್ಕೋರ್ ಗಳಿಸಿ ದಾಖಲೆ ನಿರ್ಮಿಸಿದ್ದು, 2005ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತಾವು 317 ರನ್ ಗಳಿಸಿದಾಗ ಲಾರಾ ನಾನು ದಾಖಲೆ ಮುರಿಯಬಹುದೆಂದು ಭಯಪಟ್ಟಿದ್ದಾಗಿ ಗೇಲ್ ಬರೆದಿದ್ದಾರೆ. 
 
ನಾನು ಲಾರಾ ದಾಖಲೆ ಸಮೀಪಿಸುತ್ತಿದ್ದಂತೆ ಗೇಲ್ ಆಗಾಗ್ಗೆ ಬಂದು ಸ್ಕೋರ್‌ಬೋರ್ಡ್ ಪರೀಕ್ಷೆ ಮಾಡುತ್ತಿದ್ದರು ಮತ್ತು ಆತಂಕಕ್ಕೆ ಒಳಗಾದಂತೆ ಕಂಡರು ಎಂದು ಗೇಲ್ ಬರೆದಿದ್ದಾರೆ. 
 
ನಾನು ತುಂಬಾ ಶಾಟ್‌‍ಗಳನ್ನು ಹೊಡೆಯುತ್ತೇನೆ. ಕೆಲವು ಬಾರಿ ಔಟ್ ಆದಾಗ ನಾನು ಆಟದ ಬಗ್ಗೆ ಕಾಳಜಿ ವಹಿಸುವುದಿಲ್ಲವೆಂದು ಭಾವಿಸುತ್ತಾರೆ ಎಂದು ಗೇಲ್ ಬರೆದಿದ್ದಾರೆ.
 
 ಕೆಲವು ಆಟಗಾರರು ತಮ್ಮ ದಾಖಲೆಗಳ ಬಗ್ಗೆ ಕಾಳಜಿ ವಹಿಸುತ್ತಾರೆ. ಬ್ರಿಯಾನ್ ಲಾರಾ 4 ರನ್‌ಗೆ ಆ ಪಂದ್ಯದಲ್ಲಿ ಔಟಾದಾಗ ಅವರು ಡ್ರೆಸ್ಸಿಂಗ್ ರೂಂನಲ್ಲಿ ಕುಳಿತು ಪುಸ್ತಕ ಓದುತ್ತಿದ್ದರು. ಆಗಾಗ್ಗೆ ಬಾಲ್ಕನಿಗೆ ತೆರಳಿ ಸ್ಕೋರ್ ಬೋರ್ಡ್ ಪರೀಕ್ಷೆ ಮಾಡುತ್ತಿದ್ದರು. ಬಳಿಕ ಪುನಃ ಒಳಕ್ಕೆ ಹೋಗುತ್ತಿದ್ದರು.  ಸರವಣ್ ಇದನ್ನು ಗಮನಿಸಿ ನನಗೆ ತಿಳಿಸಿದರು. ಪ್ರತಿ ಬಾರಿ ಲಾರಾ ಹೊರಕ್ಕೆ ಬಂದು ಅವರ ದಾಖಲೆಯನ್ನು ನಾನು ಸಮೀಪಿಸುವುದನ್ನು ಕಂಡು ಚಿಂತಿತರಾದಂತೆ ಕಂಡರು.ನಾನು ಭೋಜನಕ್ಕೆ ಬಂದಾಗ ಲಾರಾ ಏನನ್ನೂ ಮಾತನಾಡಲಿಲ್ಲ. ಯಾವುದೇ ಸಲಹೆ ನೀಡಲಿಲ್ಲ ಎಂದು ಗೇಲ್ ಬರೆದಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ