ತಮ್ಮದೇ ರಾಷ್ಟ್ರ ಗೀತೆ ಕೇಳಿ ಪಾಕ್ ಬೌಲರ್ ಯಾಸಿರ್ ಶಾಗೆ ನಗು ಬಂದಿದ್ದೇಕೆ?

ಶನಿವಾರ, 7 ಜನವರಿ 2017 (10:20 IST)
ಸಿಡ್ನಿ:  ಪಂದ್ಯ ಆರಂಭಕ್ಕೆ ಮೊದಲು ಎರಡೂ ದೇಶಗಳ ಕ್ರಿಕೆಟಿಗರು ಸಾಲಾಗಿ ನಿಂತು ರಾಷ್ಟ್ರ ಗೀತೆಗೆ ಗೌರವ ಸಲ್ಲಿಸುವುದು ಸಾಮಾನ್ಯ. ಮೈಕ್ ನಲ್ಲಿ ಕೇಳಿ ಬರುವ ರಾಷ್ಟ್ರ ಗೀತೆ ಜತೆಗೆ ತಾವೂ ಅಟೆನ್ಷನ್ ಆಗಿ ನಿಂತು ಹಾಡುವುದು ಪದ್ಧತಿ. ಆದರೆ ಪಾಕಿಸ್ತಾನದ ಬೌಲರ್ ಯಾಸಿರ್ ಶಾ ಗೌರವ ಸಲ್ಲಿಸುವ ಒತ್ತಿ ಬರುತ್ತಿದ್ದ ನಗು ತಡೆದುಕೊಂಡು ನಿಂತಿದ್ದರು.

ಇದಾಗಿದ್ದು ಆಸ್ಟ್ರೇಲಿಯಾ ವಿರುದ್ಧ ನಡೆದ ಸಿಡ್ನಿ ಟೆಸ್ಟ್ ನ ಮೊದಲ ದಿನ. ಆಸ್ಟ್ರೇಲಿಯಾದ ಹಾಡುಗಾರ್ತಿ ತಮ್ಮ ಆಂಗ್ಲ ಶೈಲಿಯಲ್ಲಿ ಪಾಕಿಸ್ತಾನದ ಉರ್ದು ಭಾಷೆಯ ರಾಷ್ಟ್ರ ಗೀತೆಯನ್ನು ಹಾಡುತ್ತಿದ್ದರೆ, ಅದು ವಿಚಿತ್ರವಾಗಿ ಕೇಳುತ್ತಿತ್ತು.

ಪಾಕಿಸ್ತಾನದ ಇತರ ಆಟಗಾರರು ಎದೆ ಮೇಲೆ ಕೈಯಿಟ್ಟುಕೊಂಡು ಗಂಭೀರವಾಗಿ ರಾಷ್ಟ್ರಗೀತೆ ಹಾಡತ್ತಿದ್ದರೆ, ಯಾಸಿರ್ ಶಾ ಕೂಡಾ ಅವರನ್ನೇ ಅನುಕರಿಸುತ್ತಿದ್ದರು. ಆದರೆ ಆ ಗಾಯಕಿಯ ಹಾಡುವ ಶೈಲಿಯನ್ನು ಕೇಳಿ ಅವರಿಗೆ ನಗು ತಡೆಯಲಾಗುತ್ತಿರಲಿಲ್ಲ. ಕಷ್ಟಪಟ್ಟು ಕಂಟ್ರೋಲ್ ಮಾಡಿಕೊಂಡರೂ, ರಾಷ್ಟ್ರಗೀತೆ ಮುಗಿಯುತ್ತಿದ್ದಂತೆ ಪಕ ಪಕನೇ ನಕ್ಕರು. ಈ ಫನ್ನಿ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ