ಗೌತಮ್ ಗಂಭೀರ್ ಟೀಂ ಇಂಡಿಯಾಕ್ಕೆ ಆಯ್ಕೆಯಾಗದಿರಲು ಕಾರಣ ಯಾರು?!

ಮಂಗಳವಾರ, 9 ಮೇ 2017 (07:50 IST)
ಮುಂಬೈ: ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡದ ಘೋಷಣೆಯಾಗಿದೆ. ಹಾಗಿದ್ದೂ ಇನ್ ಫಾರ್ಮ್ ಬ್ಯಾಟ್ಸ್ ಮನ್ ಗೌತಮ್ ಗಂಭೀರ್ ರನ್ನು ಕಡೆಗಣಿಸಲಾಗಿದೆ. ಇದಕ್ಕೆ ಕಾರಣ ಯಾರು?

 
ಹೀಗೊಂದು ಪ್ರಶ್ನೆ ಗೌತಿ ಅಭಿಮಾನಿಗಳು ಕೇಳುತ್ತಿದ್ದಾರೆ. ಅವರ ಪ್ರಕಾರ ಇದು ಭಾರತ ತಂಡದ ಪ್ರಭಾವಿ ಆಟಗಾರನೊಬ್ಬನ ವೈಯಕ್ತಿಕ ಒಣ ಪ್ರತಿಷ್ಠೆಯ ಪರಿಣಾಮವಂತೆ.

ಟೀಂ ಇಂಡಿಯಾದಲ್ಲಿ ಪ್ರಭಾವಿ ಸ್ಥಾನದಲ್ಲಿದ್ದುಕೊಂಡು, ತಮ್ಮ ವೈಯಕ್ತಿಕ ಹಿತಾಸಕ್ತಿಗಳಿಂದಾಗಿ ಗಂಭೀರ್ ಗೆ ಸ್ಥಾನ ನೀಡದೇ ಇರಲು ಆ ಆಟಗಾರ ಸಫಲರಾಗಿದ್ದಾರೆ ಎಂದು ಗಂಭೀರ್ ಅಭಿಮಾನಿಗಳು ಆರೋಪಿಸಿದ್ದಾರೆ.

ಐಪಿಎಲ್ ನಲ್ಲಿ ಈ ಬಾರಿ ಅತ್ಯಧಿಕ ರನ್ ಗಳಿಸಿದ ಗಂಭೀರ್ ಗೆ ಒಂದು ಅವಕಾಶ ಸಿಗಬೇಕಿತ್ತು ಎಂಬುದು ಅಭಿಮಾನಿಗಳ ಆಕ್ಷೇಪ. ಅಷ್ಟೊಂದು ಉತ್ತಮವಾಗಿ ಆಡದ ಶಿಖರ್ ಧವನ್ ಮತ್ತು ಮನೀಶ್ ಪಾಂಡೆಗೆ ಯಾಕೆ ಸ್ಥಾನ ನೀಡಬೇಕಿತ್ತು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ