ಆಸ್ಟ್ರೇಲಿಯಾ ಟೆಸ್ಟ್ ಗೆ ಟೀಂ ಇಂಡಿಯಾ ವಿಕೆಟ್ ಕೀಪರ್ ಸ್ಥಾನ ಇಬ್ಬರಲ್ಲಿ ಯಾರಿಗೆ?

ಗುರುವಾರ, 26 ನವೆಂಬರ್ 2020 (09:58 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿರುವ ಬಾಕ್ಸಿಂಗ್ ಡೇ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾದ ವಿಕೆಟ್ ಕೀಪರ್ ಯಾರಾಗಲಿದ್ದಾರೆ?


ಟೆಸ್ಟ್ ತಂಡಕ್ಕೆ ಆಯ್ಕೆಗಾರರ ವೃದ್ಧಿಮಾನ್ ಸಹಾ ಮತ್ತು ರಿಷಬ್ ಪಂತ್ ರೂಪದಲ್ಲಿ ಇಬ್ಬರು ವಿಕೆಟ್ ಕೀಪರ್ ಗಳನ್ನು ಆಯ್ಕೆ ಮಾಡಿದ್ದಾರೆ. ಆ ಪೈಕಿ ವೃದ್ಧಿಮಾನ್ ಸಹಾ ಈಗಷ್ಟೇ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಟೆಸ್ಟ್ ಸರಣಿಗೆ ಇನ್ನೂ ಒಂದು ತಿಂಗಳು ಬಾಕಿ ಇರುವ ಕಾರಣ ಅವರು ಟೆಸ್ಟ್ ಸರಣಿ ವೇಳೆಗೆ ಚೇತರಿಸಿಕೊಳ್ಳಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕಳೆದ ಬಾರಿ ರಿಷಬ್ ಪಂತ್ ಸ್ಲೆಡ್ಜಿಂಗ್ ಮೂಲಕವೇ ಹೆಚ್ಚು ಸುದ್ದಿ ಮಾಡಿದ್ದರು. ಅನುಭವದ ಆಧಾರದಲ್ಲಿ ನೋಡಿದರೆ, ವೃದ್ಧಿಮಾನ್ ಸಹಾಗೆ ಮಣೆ ಹಾಕುವ ಸಾಧ‍್ಯತೆ ಹೆಚ್ಚು. ಆದರೂ ಯುವ ವಿಕೆಟ್ ಕೀಪರ್ ಗಳನ್ನು ಬೆಳೆಸುವ ಉದ್ದೇಶದಿಂದ, ರಿಷಬ್ ರನ್ನು ಆಯ್ಕೆ ಮಾಡಿದರೂ ಅಚ್ಚರಿಯಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ