ಇದೀಗ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯೂ ಅದೇ ಉಭಯ ಸಂಕಟದಲ್ಲಿದೆ. ಪಿತೃತ್ವ ರಜೆ ಪಡೆದಿರುವ ಕೊಹ್ಲಿ ಆಸ್ಟ್ರೇಲಿಯಾ ವಿರುದ್ದ ಮೂರು ಟೆಸ್ಟ್ ಪಂದ್ಯಗಳಿಗೆ ಗೈರು ಹಾಜರಾಗಲಿದ್ದಾರೆ. ಭಾರತ-ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಗೆ ಹೈ ವೋಲ್ಟೇಜ್ ಆಕರ್ಷಣೆ ಬರಲು ಕೊಹ್ಲಿ ಪ್ರಮುಖ ಕಾರಣ. ಒಂದು ವೇಳೆ ಕೊಹ್ಲಿಯಿಲ್ಲದೇ ಹೋದರೆ ಆದಾಯಕ್ಕೆ ಪೆಟ್ಟು ಬೀಳಬಹುದೇ ಎಂಬ ಪ್ರಶ್ನೆಗೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಮುಖ್ಯಸ್ಥ ನಿಕಿ ಹೋಲೇ ಪ್ರತಿಕ್ರಿಯಿಸಿದ್ದಾರೆ. ಕೊಹ್ಲಿ ಏಕದಿನ, ಟಿ20 ಮತ್ತು ಮೊದಲ ಟೆಸ್ಟ್ ಗೆ ಉಪಸ್ಥಿತರಿರುತ್ತಾರೆ ಎನ್ನುವುದು ಖುಷಿಯ ವಿಚಾರ. ಅವರ ಮುಂದಿನ ಪಂದ್ಯಗಳಿಗೆ ಗೈರಾಗುವುದು ಆರ್ಥಿಕವಾಗಿ ನಮಗೆ ಅಷ್ಟು ಹೊಡೆತ ನೀಡಲಾರದು ಎಂಬ ನಂಬಿಕೆಯಲ್ಲಿದ್ದೇವೆ ಎಂದು ನಿಕಿ ಹೇಳಿದ್ದಾರೆ.