ಇಶಾಂತ್ ಶರ್ಮಾರನ್ನು ಯಾವುದೇ ಐಪಿಎಲ್ ತಂಡ ಖರೀದಿಸಲಿಲ್ಲವೇಕೆ? ಗೌತಮ್ ಗಂಭೀರ್ ಬಳಿಯಿದೆ ಉತ್ತರ!

ಮಂಗಳವಾರ, 21 ಫೆಬ್ರವರಿ 2017 (13:51 IST)
ನವದೆಹಲಿ: ಟೀಂ ಇಂಡಿಯಾದ ಪ್ರಮುಖ ವೇಗಿಯಾಗಿದ್ದುಕೊಂಡೂ ಐಪಿಎಲ್ ನ ಯಾವುದೇ ತಂಡಗಳು ವೇಗಿ ಇಶಾಂತ್ ಶರ್ಮಾರನ್ನು ಕೊಳ್ಳದೇ ಇರುವುದು ಅಚ್ಚರಿಗೆ ಕಾರಣವಾಗಿದೆ. ಗೌತಮ್ ಗಂಭೀರ್ ಇದಕ್ಕೆ ಕಾರಣ ಕೊಟ್ಟಿದ್ದಾರೆ.

 
ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡದ ನಾಯಕನಾಗಿರುವ ಗಂಭೀರ್ ಇದಕ್ಕೆಲ್ಲಾ ಮೂಲ ಬೆಲೆ ಕಾರಣವಾಗಿರಬಹುದು ಎಂದಿದ್ದಾರೆ. “ಇಶಾಂತ್ ರ ಮೂಲ ಬೆಲೆ ನೋಡಿ ನನಗೆ ಅಚ್ಚರಿಯಾಯಿತು. ಅದು ಬಹುಶಃ ತುಂಬಾ ಜಾಸ್ತಿಯಾಯಿತು” ಎಂದು ಗಂಭೀರ್ ಕಾರಣಕೊಟ್ಟಿದ್ದಾರೆ.

ಮೂಲಧನ ಹೆಚ್ಚಾಗಿದ್ದ ಕಾರಣಕ್ಕೇ ಯಾವ ತಂಡಗಳೂ ಅವರನ್ನು ಖರೀದಿಸುವ ಆಸಕ್ತಿ ತೋರಿಸಲಿಲ್ಲ. ಕೇವಲ ಬೌಲರ್ ಮಾತ್ರ ಆಗಿರುವ ಇಶಾಂತ್ ಮೇಲೆ ಯಾವುದೇ ತಂಡಗಳು ಹಣ ಹೂಡಲು ಹಿಂದೇಟು ಹಾಕಿರಬಹುದು ಎಂದು ಗಂಭೀರ್ ಅಂದಾಜಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ