ಟೀಂ ಇಂಡಿಯಾ ಕೋಚ್ ಹುದ್ದೆ ನಿರಾಕರಿಸಿದ್ದ ರಾಹುಲ್ ದ್ರಾವಿಡ್: ಕಾರಣವೇನು ಗೊತ್ತಾ?

ಸೋಮವಾರ, 6 ಜುಲೈ 2020 (11:40 IST)
ಮುಂಬೈ: ಎಲ್ಲಾ ಸರಿ ಹೋಗಿದ್ದರೆ ಅನಿಲ್ ಕುಂಬ್ಳೆ ಬಳಿಕ ಟೀಂ ಇಂಡಿಯಾಗೆ ರಾಹುಲ್ ದ್ರಾವಿಡ್ ಕೋಚ್ ಆಗಬೇಕಿತ್ತು. ಆದರೆ ಈ ಅವಕಾಶವನ್ನು ಅವರಾಗಿಯೇ ನಿರಾಕರಿಸಿದರು ಎಂದು ಬಿಸಿಸಿಐ ಮಾಜಿ ಸಿಇಒ ವಿನೋದ್ ರಾಯ್ ಹೇಳಿದ್ದಾರೆ.


2017 ರಲ್ಲಿ ಅನಿಲ್ ಕುಂಬ್ಳೆ ರಾಜೀನಾಮೆ ನೀಡಿದ ಬಳಿಕ ರಾಹುಲ್ ಹೆಸರು ಚಾಲ್ತಿಯಲ್ಲಿತ್ತು. ಅವರಿಗೆ ಕೋಚ್ ಹುದ್ದೆ ನೀಡಲು ತಯಾರಿದ್ದೆವು. ಆದರೆ ದ್ರಾವಿಡ್ ನಿರಾಕರಿಸಿದರು ಎಂದು ವಿನೋದ್ ರಾಯ್ ಹೇಳಿದ್ದಾರೆ. ಇದಕ್ಕೆ ದ್ರಾವಿಡ್ ನೀಡಿದ್ದ ಕಾರಣವೇನು ಗೊತ್ತಾ?

‘ನನಗೆ ಮನೆಯಲ್ಲಿ ಇಬ್ಬರು ಬೆಳೆಯುತ್ತಿರುವ ಮಕ್ಕಳಿದ್ದಾರೆ. ಸದ್ಯಕ್ಕೆ ಟೀಂ ಇಂಡಿಯಾ ಜತೆಗೆ ಮನೆ, ಕುಟುಂಬ ಬಿಟ್ಟು ತುಂಬಾ ಸಮಯ ಪ್ರವಾಸ ಮಾಡುತ್ತಿರಲು ಕಷ್ಟವಾಗುತ್ತದೆ. ಇದರಿಂದ ನನಗೆ ಟೀಂ ಇಂಡಿಯಾ ಕಡೆಗೆ ಸಂಪೂರ್ಣ ಗಮನ ಕೊಡಲು ಸಾಧ‍್ಯವಾಗಲ್ಲ’ ಎಂದಿದ್ದರಂತೆ ದ್ರಾವಿಡ್. ಅಷ್ಟೇ ಅಲ್ಲ ಆಗ ದ್ರಾವಿಡ್ ಅಂಡರ್ 19 ಕೋಚ್ ಆಗಿದ್ದರು. ಹುಡುಗರನ್ನು ಭವಿಷ್ಯದ ತಂಡಕ್ಕೆ ತಯಾರು ಮಾಡಲು ಅವರದ್ದೇ ಯೋಜನೆ ಹಾಕಿಕೊಂಡಿದ್ದರಂತೆ. ಇದರಲ್ಲೇ ನನಗೆ ಖುಷಿಯಿದೆ ಎಂದು ದ್ರಾವಿಡ್ ಟೀಂ ಇಂಡಿಯಾ ಕೋಚ್‍ ಆಗುವ ಅವಕಾಶವನ್ನು ನಿರಾಕರಿಸಿದರು ಎಂದು ವಿನೋದ್ ರಾಯ್ ಬಹಿರಂಗಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ